ಹಿಂದೂ ಜನಜಾಗೃತಿ ಸಮಿತಿಯಿಂದ ಹೊಸ ಅಭಿಯಾನ
ಹಿಂದೂ ಜನಜಾಗೃತಿ ಸಮಿತಿಯು 20ನೇ ವರ್ಷಾಚರಣೆ ಪ್ರಯುಕ್ತ ಹೊಸ ಅಭಿಯಾನವನ್ನ ಕೈಗೆತ್ತಿಕೊಂಡಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹಿಂದೂ ಜನಜಾಗೃತಿ ಸಮಿತಿ ಅ. 3ರಿಂದ ಅ.5ರವರೆಗೆ ಹರ್ ಘರ್ ಭಗವಾದ್ವಜ ಅಭಿಯಾನ ಮಾಡಲು ಕರೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಯುವಕರು ಜಾಗೃತಿಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಹಿಂದೂ ಬಾಂಧವರು ಸಾಮಾಜಿಕ ಜಾಲತಾಣಗಳಲ್ಲಿ ಹರ್ ಘರ್ ಭಗವಾ ದ್ವಜ ಹಾರಿಸಿ ಸೆಲ್ಫಿ ತೆಗೆದು ಹಿಂದೂ ಜನಜಾಗೃತಿ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡುವಂತೆ ಸೂಚನೆಯನ್ನ ನೀಡಲಾಗಿದೆ. ದೇಶಾದ್ಯಂತ ಹರ್ ಘರ್ ಭಗವಾದ್ವಜ ಅಭಿಯಾನದಲ್ಲಿ ಭಾಗವಹಿಸುವಂತೆ ಹಿಂದು ಕಾರ್ಯಕರ್ತರಿಗೆ ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್ ಗೌಡ ಮನವಿಯನ್ನ ಮಾಡಿದ್ದಾರೆ.