10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆ

ಸೋಮವಾರ, 4 ಜುಲೈ 2022 (20:04 IST)
ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.
ಭಾರತದ 10 ರಾಜ್ಯಗಳಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದ್ದು, ಈ ಮೊದಲು ಕೊರೊನಾ ಬಂದಿದ್ದವರಿಗೂ ಹೊಸದಾಗಿ ಸೋಂಕು ತಗುಲುವ ಸಾಮರ್ಥ್ಯ ಹೊಂದಿದೆ.
 
ಈಗಾಗಲೇ ಕೊರೊನಾ ಲಸಿಕೆ ಪಡೆದಿದ್ದವರಿಗೂ BA.2.75 ಪ್ರಭೇದ ತಗುಲುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದರ ಮೇಲೆ ನಿಗಾ ವಹಿಸುವ ಅಗತ್ಯ ಇದೆ ಎಂದು ವಿಜ್ಞಾನಿ ಟೀಮ್ ಪಿಕಾಕ್ ಹೇಳಿಕೆ ನೀಡಿದ್ದಾರೆ.
 
BA.2.75 ಪ್ರಭೇದದಿಂದ ಹೆಚ್ಚಿನ ರೂಪಾಂತರವಾಗಲಿದ್ದು, ಬಹುಶಃ ಎರಡನೇ ತಲೆಮಾರಿನ ಪ್ರಭೇದ ಇದಾಗಿದೆ. ಬಹಳ ವೇಗವಾಗಿ ಬೆಳವಣಿಗೆ, ಹೆಚ್ಚಿನ ಭೌಗೋಳಿಕ ಪ್ರದೇಶಕ್ಕೆ ಹರಡುವಿಕೆಯ ಸಾಮರ್ಥ್ಯವನ್ನು ಇದು ಹೊಂದಿದೆ.
 
ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದ ಎಸ್ಕೇಪ್ ಆಗುವ ಸಾಮರ್ಥ್ಯವೂ ಇದರಲ್ಲಿದೆ. ಇಸ್ರೇಲಿ ತಜ್ಞರ ಪ್ರಕಾರ, ಭಾರತದಲ್ಲಿ ಸುಮಾರು 10 ರಾಜ್ಯಗಳು ಹೊಸ ಒಮಿಕ್ರಾನ್ ಉಪ-ವೇರಿಯಂಟ್ BA.2.75 ಅನ್ನು ಪತ್ತೆಹಚ್ಚಿವೆ ಎಂದು ಹೇಳಲಾಗಿದೆ.
 
ಇದು ಆತಂಕಕಾರಿಯಾಗಿರಬಹುದು ಎಂದು ತಜ್ಞರ ಹೇಳಿಕೆ ನೀಡಿದ್ದಾರೆ. ಟೆಲ್ ಹ್ಯಾಶೋಮರ್‌ನಲ್ಲಿರುವ ಶೆಬಾ ಮೆಡಿಕಲ್ ಸೆಂಟರ್‌ನಲ್ಲಿರುವ ಸೆಂಟ್ರಲ್ ವೈರಾಲಜಿ ಲ್ಯಾಬೊರೇಟರಿಯ ಡಾ ಶೇಯ್ ಫ್ಲೆಶನ್ ಸರಣಿ ಟ್ವೀಟ್ ಮಾಡಿದ್ದಾರೆ.
 
ಎಂಟು ದೇಶಗಳ 85 ಅನುಕ್ರಮಗಳನ್ನು ಜೀನೋಮಿಕ್ ಡೇಟಾದ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ನೆಕ್ಸ್ಟ್‌ಸ್ಟ್ರೇನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಇದರಲ್ಲಿ ಭಾರತದ 69 ಮಂದಿ ಸೇರಿದ್ದಾರೆ. ದೆಹಲಿ (1), ಹರಿಯಾಣ (6), ಹಿಮಾಚಲ ಪ್ರದೇಶ (3), ಜಮ್ಮು (1), ಕರ್ನಾಟಕ (10), ಮಧ್ಯಪ್ರದೇಶ (5), ಮಹಾರಾಷ್ಟ್ರ (27), ತೆಲಂಗಾಣ (2), ಉತ್ತರ ಪ್ರದೇಶ (1), ಮತ್ತು ಪಶ್ಚಿಮ ಬಂಗಾಳ (13) ದಲ್ಲಿ BA.2.75 ಪ್ರಭೇದ ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ