ನಾಳೆಯಿಂದ ಬೆಂಗಳೂರಿನಲ್ಲಿ ಮದ್ಯ ಸಿಗೋದು ಅನುಮಾನ

ಸೋಮವಾರ, 4 ಜುಲೈ 2022 (19:55 IST)
ಸರ್ಕಾರದ ಇ ಇಂಡೆಂಟ್ ಪದ್ದತಿಗೆ ಮದ್ಯದಂಗಡಿ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಾಳೆಯಿಂದ ಬೆಂಗಳೂರಿನಲ್ಲಿ ಮದ್ಯ ಸಿಗೋದು ಅನುಮಾನವಾಗಿದೆ. ಬೆಂಗಳೂರಿನ ಕೆಎಸ್ಬಿಸಿಎಲ್ ಡಿಪೋಗಳಿಂದ ಮದ್ಯ ಖರೀದಿಸದಿರಲು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಒಮ್ಮತದ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೇವಲ ಸ್ಟಾಕ್ ಇಟ್ಟಿಕೊಂಡಿರೋ ಅಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲಿದ್ದಾರೆ. ಮದ್ಯ ಪ್ರಿಯರ ಜೊತೆ ಸರ್ಕಾರದ ಬೊಕ್ಕಸಕ್ಕೂ ಕೋಟಿ ಕೋಟಿ ನಷ್ಟದ ಭೀತಿ ಎದುರಾಗಲಿದೆ. ನೂತನ ಸಾಫ್ಟ್ವೇರ್ ವಿರುದ್ದ ಕಳೆದ ಒಂದೂವರೆ ತಿಂಗಳಿಂದ ಮದ್ಯ ಮಾರಾಟಗಾರರು ಹೋರಾಟ ಮಾಡುತ್ತಿದ್ದರು. ಸದ್ಯ ಮದ್ಯ ಸ್ಟಾಕ್ ಇಲ್ಲದೆ 11 ಸಾವಿರ ಬಾರ್ ಮಾಲೀಕರು ಪರದಾಡುವಂತಾಗಿದೆ. ಲೈಸೆನ್ಸ್ ರಿನೀವಲ್ ಪ್ರಾಬ್ಲಂ ಇನೊಂದು ಕಡೆ ಸಮಸ್ಯೆ ಆಗಿದೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ