ಸಾರ್ವಜನಿಕ ಉದ್ದಿಮೆಯ ಸಾರಿಗೆ ಸಮಸ್ಯೆ ನೀಗಿಸಿದ ಸಾಮಾನ್ಯ ಕಾರ್ಮಿಕ ಅಶೋಕ ಎಂ.ಎನ್

ಸೋಮವಾರ, 4 ಜುಲೈ 2022 (19:49 IST)
ವಿಶ್ವದ ಅಗ್ರಮಾನ್ಯ ವೈಮಾನಿಕ ಸಂಸ್ಥೆಗಳಲ್ಲಿ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯೂ ಕೂಡಾ ಒಂದಾಗಿದೆ. ಹಲವು ವರ್ಷಗಳ ಹಿಂದೆ ಎಚ್ಎಎಲ್ ಕಂಪೆನಿಯು ತನ್ನ ಉದ್ಯೋಗಿಗಳಿಗೆ  ಸಾರಿಗೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದ ಕಾರಣ ಉದ್ಯೋಗಿಗಳ ಜೀವನ ಸುಭಿಕ್ಷವಾಗಿತ್ತು. ನಂತರ ಸಾರಿಗೆ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು, ಎಲ್ಲವನ್ನೂ ಅರಿತ ಸಾಮಾನ್ಯ ಕಾರ್ಮಿಕ ಅಶೋಕ್ ನೌಕರರಿಗೆ ಬಸ್ ಒದಗಿಸಿ ಮಹಾತ್ಕಾರ್ಯ ಮಾಡಿದ್ದಾರೆ. ಎಚ್ಎಎಲ್ ನಂಥ ಒಂದು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯ ಸುರಕ್ಷಿತ ಸಾರಿಗೆಯಿಲ್ಲದೆ ಪರಿತಪಿಸುತ್ತಿದ್ದ ಸಮಯದಲ್ಲಿ ಅಶೋಕ್ ತಮ್ಮ ಸ್ವಂತ ಶ್ರಮ, ಹಣ ವ್ಯಯಮಾಡಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಅಶೋಕ್ ಅವರು ಒಬ್ಬ ಸಾಮಾನ್ಯ ಕಾರ್ಮಿಕರಾಗಿ ಅಧಿಕಾರವಿಲ್ಲದೆಯೇ ಅಸಾಮಾನ್ಯವಾದುದನ್ನು ಸಾಧಿಸಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ