130 ವರ್ಷದ ಹಳೆ ರೈಲ್ವೆ ನಿಲ್ದಾಣಕ್ಕೆ ಹೊಸ ಟಚ್

ಗುರುವಾರ, 1 ಡಿಸೆಂಬರ್ 2022 (20:18 IST)
ಸಿಲಿಕಾನ್ ಸಿಟಿ ಬೆಂಗಳೂರಿನ ಎರಡನೇ ಅತೀ ದೊಡ್ಡ ರೈಲ್ವೆ ಟರ್ಮಿನಲ್‌ ಇನ್ಮುಂದೆ ಹೈಟೆಕ್ ರೈಲ್ವೆ ನಿಲ್ದಾಣವಾಗಲಿದೆ.ತಿಂಗಳ ಹಿಂದೆ ಯಶವಂತಪುರ ನಿಲ್ದಾಣದ ಪುನಶ್ಚೇತನ ಕಾಮಗಾರಿಗೆ ನೈರುತ್ಯ ರೈಲ್ವೆ ಸಿಬ್ಬಂದಿ ಟೆಂಡರ್ ಕರೆದಿದ್ರು.ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ 60 ಸಾವಿರ ಪ್ರಯಾಣಿಕರು ಬರುತ್ತಾರೆ.ಇನ್ನು ಈ ಸಾಮರ್ಥ್ಯವನ್ನು 1 ಲಕ್ಷಕ್ಕೆ ಏರಿಕೆ ಮಾಡುವ ಪ್ಲಾನ್ ಇದೆ.ಹೊಸ ಕಟ್ಟಡದ ಜೊತೆ ಮಳೆನೀರು ಕೊಯ್ಲು ಅಳವಡಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.ಹಸಿರು ನಿಲ್ದಾಣ ಹೆಸರಿನಲ್ಲಿ ಹೈಟೆಕ್ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ 2025 ಡೆಡ್ ಲೈನ್  ತೆಗೆದುಕೊಂಡಿದ್ದು,380 ಕೋಟಿ ರೂ ವೆಚ್ಚದಲ್ಲಿ ಪುನರಾಭಿವೃದ್ಧಿ ಕಾರ್ಯ ದಿನಗಣನೆ ಶುರುವಾಗಿದೆ.ರೈಲ್ವೆ ನಿಲ್ದಾಣದಲ್ಲೆ ವಾಣಿಜ್ಯ, ಫುಡ್‌ ಕೋರ್ಟ್‌, ಮಕ್ಕಳ ಪಾರ್ಕ್ ಮತ್ತು ಮನರಂಜನಾ ಕೇಂದ್ರ ನಿರ್ಮಾಣವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ