ಪ್ರಕರಣ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದು ನಗರದಿಂದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬ್ಯಾಗ್ ಗಳನ್ನೇ ಎಗರಿಸುತ್ತಿದ್ದ ಅಂದ್ರ ಮೂಲದ ಖತರ್ನಾಕ್ ಲೇಡಿ ಮಮತಾ(28) ಮತ್ತು ಈಕೆಯ ಗೆಳೆಯ ದೇವರ ದರ್ಶನ ಪಡೆದು ಪುನೀತರಾಗಬೇಕು ಎನ್ನುವವರ ಬೆಲೆಬಾಳುವ ಕಾಣಿಕೆಗಳನ್ನು ಎಗರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಡವಿಡಲು ಬಂದಾಗ ಅಂದರ್:
ಕುಕ್ಕೆಯಲ್ಲಿ ಕದ್ದಿದ್ದ ಚಿನ್ನಾಭರಣವನ್ನು ಚಿನ್ನದ ಅಂಗಡಿಯಲ್ಲಿ ಅಡವಿಡಲು ಬೆಂಗಳೂರಿಗೆ ಆಗಮಿಸಿದಾಗ ಕಳ್ಳ ಜೋಡಿಗಳಾದ ಮಮತಾ ಮತ್ತು ಮಹದೇವ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದವರನ್ನು ಹಿಡಿದು ಯಶವಂತಪುರ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಕುಕ್ಕೆಯ ಯಾತ್ರಾರ್ಥಿಗಳ ಚಿನ್ನಾಭರಣ ಕಳುವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.