ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಭಯದಲ್ಲಿ ಶೌಚಾಲಯವನ್ನು ಹುಡುಕುತ್ತಿರುವಾಗ ಪಾನಿಕ್ ಬಟನ್ ಒತ್ತಿದ್ದಾನೆ.
ವಿಮಾನಯಾನ ಈ ಬಗ್ಗೆ ಪ್ರತಿಕ್ರಿಯಿಸಿ, "ವಾರಣಾಸಿಗೆ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವನ್ನು ಹುಡುಕುತ್ತಿರುವಾಗ ಕಾಕ್‌ಪಿಟ್ ಪ್ರವೇಶ ಪ್ರದೇಶವನ್ನು ಸಮೀಪಿಸಿದ ಘಟನೆಯ ಕುರಿತು ಮಾಧ್ಯಮ ವರದಿಗಳು ನಮಗೆ ತಿಳಿದಿವೆ. ದೃಢವಾದ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ ಮತ್ತು ರಾಜಿ ಮಾಡಿಕೊಂಡಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಸುರಕ್ಷತಾ ಮಾನದಂಡಗಳ ಪ್ರಕಾರ, ಅನಧಿಕೃತ ವ್ಯಕ್ತಿಗಳು ಕಾಕ್‌ಪಿಟ್‌ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಮತ್ತು ಅಂತಹ ಯಾವುದೇ ಪ್ರಯತ್ನವು ನಿಯಮಗಳನ್ನು ಉಲ್ಲಂಘಿಸುತ್ತದೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಹೊರಟು 10.27 ಕ್ಕೆ ವಾರಣಾಸಿಗೆ ಬಂದಿಳಿದ ವಿಮಾನ IX-1086 ನಲ್ಲಿ ಈ ಘಟನೆ ಸಂಭವಿಸಿದೆ.
ಬೆಂಗಳೂರು/ಲಕ್ನೋ: ನಗರದಿಂದ (Bengaluru) ವಾರಣಾಸಿಗೆ (Varanasi) ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) IX-1086 ವಿಮಾನದಲ್ಲಿ ಪ್ರಯಾಣಿಕನೊಬ್ಬ ಆಕಸ್ಮಿಕವಾಗಿ ಪ್ಯಾನಿಕ್ ಬಟನ್ ಒತ್ತಿದ್ದಾನೆ. ಈ ಬಗ್ಗೆ ವಿಮಾನದ ಪೈಲಟ್ ಸಿದ್ಧಾರ್ಥ್ ಶರ್ಮಾ ಅವರು ಎಟಿಸಿಗೆ (ATC) ಸಂದೇಶ ನೀಡಿದ್ದು, ತನಿಖೆ ನಡೆಯುತ್ತಿದೆ.
9 ಪ್ರಯಾಣಿಕರ ಗುಂಪಿನಲ್ಲಿ ಮಣಿ ಎಂಬ ಪ್ರಯಾಣಿಕ ಕಾಕ್‌ಪಿಟ್ ಬಾಗಿಲಿನ ಬಳಿ ಪ್ಯಾನಿಕ್ ಬಟನ್ ಒತ್ತಿ, ವಿಮಾನದಲ್ಲಿದ್ದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಆತನಿಗೆ ವಿಚಾರಿಸಿದಾಗ ತಾನು ಮೊದಲನೇ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ತನ್ನ ಕೃತ್ಯದ ಬಗ್ಗೆ ತಿಳಿದಿಲ್ಲ ಎಂದಿದ್ದಾನೆ. CISF ಸಿಬ್ಬಂದಿ ವಿಚಾರಣೆಗಾಗಿ ಎಲ್ಲಾ 9 ಪ್ರಯಾಣಿಕರನ್ನು ವಶಕ್ಕೆ ಪಡೆದು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.