ಕ್ರಿಶ್ಚಿಯನ್ ಅಂತ ಬರೆದು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತೆ: ಕಡ್ಡಿ ಮುರಿದಂಗೆ ಹೇಳಿದ ರಾಜಣ್ಣ

Krishnaveni K

ಸೋಮವಾರ, 22 ಸೆಪ್ಟಂಬರ್ 2025 (16:31 IST)
ಬೆಂಗಳೂರು: ರಾಹುಲ್ ಗಾಂಧಿಯವರ ಮತಗಳ್ಳತನದ ವಿರುದ್ಧ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ಹಿರಿಯ ಸಚಿವ ಕೆಎನ್ ರಾಜಣ್ಣ ಈಗ ಮತ್ತೊಮ್ಮೆ ಸರ್ಕಾರದ ವಿರುದ್ಧವೇ ಮಾತನಾಡಿದ್ದಾರೆ. ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಹಾಕಿಕೊಳ್ಳುವುದು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಕಡ್ಡಿ ಮುರಿದಂಗೆ ಹೇಳಿದ್ದಾರೆ.

ಕರ್ನಾಟಕ ಜಾತಿ ಗಣತಿ ಸಮೀಕ್ಷೆಯ ಕಾಲಂನಲ್ಲಿ ಕ್ರಿಶ್ಚಿಯನ್ ಧರ್ಮದ ಮುಂದೆ ಹಿಂದೂ ಜಾತಿಗಳ ಹೆಸರು ಸೇರ್ಪಡೆ ಮಾಡಿದ್ದರ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಇದೀಗ ವಿವಾದದ ನಂತರ ಆ ಕಾಲಂ ತೆಗೆದುಹಾಕಲಾಗಿದೆ. ಆದರೆ ಸರ್ಕಾರ ಈ ರೀತಿ ಮಾಡೋದರಿಂದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮತಾಂತರಗೊಂಡವರೂ ಮೂಲ ಜಾತಿಯ ಸವಲತ್ತುಗಳನ್ನು ಪಡೆಯುತ್ತಾರೆ. ನಾನು ನಾಯಕ ಜಾತಿಯವನು. ಹಾಗಂತ ಕ್ರಿಶ್ಚಿಯನ್ ಗೆ ಮತಾಂತರವಾದರೆ ನಾಯಕ ಜಾತಿಯ ಸವಲತ್ತು ಪಡೆಯಬಾರದು. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ