ಇದೆಂತ ವಿಚಿತ್ರ ಘಟನೆ : ನೂರು ರೂ ವಿಚಾರಕ್ಕೆ ಕೊಲೆ!

ಶನಿವಾರ, 18 ಡಿಸೆಂಬರ್ 2021 (07:01 IST)
ಬೆಂಗಳೂರು : ಬೆಂಗಳೂರಿನಲ್ಲಿ 100 ರೂಪಾಯಿ ವಿಚಾರಕ್ಕೆ ಕೊಲೆಯಲ್ಲಿ ಅಂತ್ಯವಾಗಿದ್ದು, ಮೂರು ತಿಂಗಳ ಬಳಿಕ ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ಟ್ವಿಸ್ಟ್ ಪಡೆದುಕೊಂಡಿದೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ಯಶವಂತಪುರ ಸಂಚಾರ ಪೊಲೀಸರು ಅಆಖ , ಅಅಖಿಗಿ ಪ್ರಯೋಜನದಿಂದ ತಾಂತ್ರಿಕವಾಗಿ ಅಪಘಾತ ಪ್ರಕರಣದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 17 ರಂದು ಪತ್ರೀಕ್ ಮತ್ತು ಸಮಿಷ್ ಎಂಬಿಬ್ಬರ ನಡುವೆ ಗಲಾಟೆ ನಡೆದಿತ್ತು. ಅದರಲ್ಲಿ 31 ವರ್ಷದ ಪತ್ರೀಕ್ ಯಾದವ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಮತ್ತಿಕೆರೆ ಬಳಿ ತೂಕ ಹಾಕುವ ತಕ್ಕಡಿಯ ಬಟ್ ನಿಂದ ಪತ್ರೀಕ್ ಯಾದವ್ ತಲೆಗೆ ಸಮಿಷ್ ಹಲ್ಲೆ ಮಾಡಿದ್ದ.

ಹಲ್ಲೆ ಬಳಿಕ ವಾಪಸ್ಸು ಮನೆಗೆ ಬಂದ ಪತ್ರೀಕ್ ಗೆ ತ್ರೀವವಾಗಿ ತಲೆ ನೋವು ಕಾಣಿಸಿಕೊಂಡಾಗ ನಿಮಾನ್ಸ್ ಆಸ್ಪತ್ರೆ ಬಳಿಕ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮನೆಯವರು ಕೇಳಿದ್ದಕ್ಕೆ ಮತ್ತಿಕೆರೆ ಬಳಿ ಸೆಲ್ಫ್ ಆಕ್ಸಿಡೆಂಟ್ ಆಗಿತ್ತು ಎಂದಿದ್ದ ಪತ್ರೀಕ್ ಯಾದವ್. ಅದರೊಂದಿಗೆ, ಸ್ನೇಹಿತರ ಜತೆ ಗಲಾಟೆ ಆಗಿರುವುದನ್ನು ಪತ್ರೀಕ್ ಯಾದವ್ ತನ್ನ ಮನೆಯವರ ಬಳಿ ಮುಚ್ಚಿಟ್ಟಿದ್ದ.

ಆದರೆ ಅಕ್ಟೋಬರ್ 20 ರಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರತೀಕ್ ಯಾದವ್ ಕೊನೆಯುಸಿರೆಳೆದಿದ್ದ. ಆಸ್ಪತ್ರೆಯ ವತಿಯಿಂದ ಯಶವಂತಪುರ ಸಂಚಾರ ಪೊಲೀಸರಿಗೆ ಅಪಘಾತವಾದ ಬಗ್ಗೆ ಮಾಹಿತಿ ರವಾನೆಯಾಗಿತ್ತು. ಯಶವಂತಪುರ ಸಂಚಾರ ಪೊಲೀಸರು ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡರು.

ಬಳಿಕ ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಿಸಿಟಿವಿ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿಕೊಂಡರು. ಅದರೆ ಮೃತಪಟ್ಟ ಪತ್ರೀಕ್ ಯಾದವ್ ಹೇಳಿದ್ದಂತೆ ಆ ಸ್ಥಳದಲ್ಲಿ ಅಕ್ಟೋಬರ್ 17 ರಂದು ಯಾವುದೇ ಅಪಘಾತ ನಡೆದಿಲ್ಲ. ಇತ್ತ ಮರಣೋತ್ತರ ಪರೀಕ್ಷೆ ನಡೆಸುವಾಗ ಸಹ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ತ್ರೀವವಾಗಿ, ಬಲವಾದ ವಸ್ತುವಿನಿಂದ ಹಲ್ಲೆಯಾಗಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ