ಪ್ರತಿಮೆ ಸರ್ಕಾರದ ಹಣದಲ್ಲಿ ಮಾಡಿದ್ದೇ ದೊಡ್ಡ ಅಪರಾಧ

ಗುರುವಾರ, 10 ನವೆಂಬರ್ 2022 (17:39 IST)
ಏರ್ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿರುವ ವಿಚಾರವಾಗಿ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪ್ರತಿಮೆ ಸರ್ಕಾರದ ಹಣದಲ್ಲಿ ಮಾಡಿದ್ದೇ ದೊಡ್ಡ ಅಪರಾಧ.ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಅವರಿಗೆ ನಾವು ಜಾಗ ಕೊಟ್ಟಿದ್ದೇವೆ ದುಡ್ಡು ಕೊಟ್ಟಿದ್ದೇವೆ.ನಾವು ಏರ್ಪೋರ್ಟ್ ಗೆ ಸುಮಾರು ನಾಲ್ಕು ಸಾವಿರ ಎಕರೆಗೂ ಹೆಚ್ಚು ಜಾಗ ನೀಡಿದ್ದೇವೆ.ಇದರಲ್ಲಿ 2000 ಎಕರೆ ಜಮೀನನಲ್ಲಿ ಎಕರೆಗೆ ಕೇವಲ ಆರು ಲಕ್ಷಕ್ಕೆ ಕೊಟ್ಟಿದ್ದೇವೆ .ಅವರಿಗೆ ಹೇಳಿದ್ದರೆ ನಿರ್ಮಾಣ ಮಾಡ್ತಿದ್ದರು .
 
ಸರ್ಕಾರದ ದುಡ್ಡಿನಲ್ಲಿ ಕಟ್ಟುವಂತಹ ಅಗತ್ಯತೆ ಏನಿತ್ತು..ನಾನು ಫೌಂಡೇಶನ್ ಹಾಕಲು ಹೋದಾಗಲೇ ಹೇಳಿದ್ದೆ .ಏರ್ಪೋರ್ಟ್ ಅವರೇ ಮಾಡುತ್ತಿದ್ದರು ಅಂತ ಅವರೇನು ಧರ್ಮಕ್ಕೆ ಮಾಡ್ತಾರಾ..? ಅವರೇನು ಸಂಪಾದನೆ ಮಾಡಿಲ್ಲವೇ..?ಅವರ ಆಸ್ತಿ ಬೆಲೆ ಇಲ್ಲ ಜಾಸ್ತಿಯಾಗಿದೆ. ವಾಣಿಜ್ಯ ಬಳಕೆಗೆ ಹೆಚ್ಚು ಜಾಗ ನೀಡಿದ್ದೇವೆ .ಅವರೇ ಪ್ರತಿಮೆ ನಿರ್ಮಾಣ ಮಾಡಬಹುದಿತ್ತು, ಸರ್ಕಾರ ಕಟ್ಟುವ ಅಗತ್ಯ ಏನಿತ್ತು?ಮುಖ್ಯ ಕಾರ್ಯದರ್ಶಿಗಳು ಯಾಕೆ ಸುಮ್ಮನೆ ಇದ್ದಾರೆ.ಈಗ ಅವರು ಇದು ಪಕ್ಷದ ಕೆಲಸ ಅಂತ ಬಿಂಬಿಸಿಕೊಳ್ಳುತ್ತಿದ್ದಾರೆ ಮಾಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಇನ್ನೂ ಇದೇ ವೇಳೆಮುಕುಡಪ್ಪ ಅವರಿಂದ ಸಿದ್ದರಾಮಯ್ಯ ಅವಹೇಳನ ವಿಚಾರವಾಗಿಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ .ನನಗೆ ಯಾರು ಹೇಳಿಲ್ಲ.ಇದು ಯಾರೇ ಮಾಡಿದರೂ ಅದು ಅವರ ಖಾಸಗಿ ವಿಚಾರ .ಆ ವಿಚಾರದಲ್ಲಿ ಏನ್ ಮಾತನಾಡಿದ್ದಾರೋ ಗೊತ್ತಿಲ್ಲ.ಅದನ್ನ ತಿಳಿದುಕೊಂಡು ನಾನು ಮಾತನಾಡುತ್ತೇನೆ.ನಮ್ಮ ನಾಯಕರನ್ನ ಡಿಫೇಮ್ ಮಾಡಲು ತಂತ್ರಗಳು ನಡಿತಾ ಇದೆ ಅದನ್ನು ಮಾತ್ರ ಹೇಳುತ್ತೇನೆ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ