ಹುಲಿ ಯಾವತ್ತಿದ್ರೂ ಹುಲಿಯೇ

ಗುರುವಾರ, 30 ನವೆಂಬರ್ 2023 (16:40 IST)
ಸಿಎಂ ಸಿದ್ಧರಾಮಯ್ಯ ಅತ್ಯಂತ ಅಸಮರ್ಥ ಸಿಎಂ ಎಂದು ಬಿಜೆಪಿ ಟ್ವೀಟ್‌ ವಿಚಾರಕ್ಕೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಐದು ವರ್ಷ ಸಂಪೂರ್ಣವಾಗಿ ಸಿಎಂ ಹುದ್ದೆ ನಿಭಾಯಿಸಿದವರೇ ಸಿದ್ಧರಾಮಯ್ಯನವರು.
 
ಅತ್ಯಂತ ಹಿಂದುಳಿದ, ದಲಿತರು, ಎಲ್ಲಾ ಸಮಾಜದವರಿಗೆ, ಬಡವರಿಗೆ ನ್ಯಾಯ ದೊರಕಿಸಿಕೊಟ್ಟವರೇ ಸಿಎಂ ಸಿದ್ಧರಾಮಯ್ಯನವರು. ವಿರೋಧ ಪಕ್ಷದವರು ಅವರು ಹಾಗೆಯೇ ಹೇಳ್ತಾರೆ. ಯಾರು ಸಮರ್ಥರಿದ್ದಾರೆ ಅನ್ನೋದನ್ನ ಕರ್ನಾಟಕ ರಾಜ್ಯದ ಏಳು ಕೋಟಿ ಜನ ತೀರ್ಮಾನ ಮಾಡಿಬಿಟ್ಟಿದ್ದಾರೆ. ಹುಲಿ ಯಾವತ್ತಿದ್ರೂ ಹುಲಿಯೇ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ