ಲೋಕಸಭೆ ಚುನಾವಣೆಯಲ್ಲಿ ಜನತೆಯಿಂದ ಬಿಜೆಪಿಗೆ ತಕ್ಕ ಪಾಠ: ಸೋನಿಯಾ ಗಾಂಧಿ

ಗುರುವಾರ, 30 ನವೆಂಬರ್ 2023 (10:53 IST)
ಭಾರತ ದೇಶ ಸಹೋದರತ್ವ, ಸಹಭಾಳ್ವೆ, ಜಾತ್ಯಾತೀತ ಮನೋಭಾವನೆ, ತ್ಯಾಗ ಬಲಿದಾನಗಳಿಗೆ ಹೆಸರುವಾಸಿಯಾಗಿದೆ. ಇವೆಲ್ಲವು ಬಿಜೆಪಿಯವರಿಗೆ ಅರ್ಥವಾಗದ ಸಂಗತಿಗಳಾಗಿವೆ. ಬಿಜೆಪಿಯವರ ಸ್ವಾರ್ಥ ನಡೆಗೆ ಅಧಿಕಾರ ನೀಡಲು ಮತದಾರರು ಯಾವತ್ತು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ ಸಹೋದರ ಸಹೋದರರ ಮಧ್ಯೆ ವಿಷಬೀಜ ಬಿತ್ತುವ ಪೃವೃತ್ತಿ ಹೊಂದಿದವರಾಗಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಜನತೆ ಎಚ್ಚರವಾಗಿರಬೇಕು ಎಂದು ಕರೆ ನೀಡಿದರು.

ಬಿಜೆಪಿ ನಾಯಕರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅದಿಕಾರ ಹಿಡಿಯುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ನಾಯಕರು ಅಧಿಕಾರದ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ. ಅಧಿಕಾರದ ದಾಹದಿಂದಾಗಿ ಬಿಜೆಪಿ ನಾಯಕರಲ್ಲೇ ಭಿನ್ನಮತ ಆರಂಭವಾಗಿದೆ.ಇಂತಹ ನಾಯಕರಿಂದ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
 
ಬಿಜೆಪಿ ನಾಯಕರು ಕೊಳಕು ಭಾಷೆಗಳನ್ನು ಬಳಸುವ ಮೂಲಕ ಜನತೆಯ ಹೃದಯ ಗೆಲ್ಲುತ್ತೇವೆ ಎಂದು ಭಾವಿಸಿದ್ರೆ ಅದು ಮೂರ್ಖತನದ ಪರಮಾವಧಿ. ಭಾರತ ಇತರ ರಾಷ್ಟ್ರಗಳಂತಲ್ಲ ಎಂದು ಮೋದಿಗೆ ತಿರುಗೇಟು ನೀಡಿದರು.
 
ರಾಜ್ಯಸರಕಾರಗಳಿಗೆ ಕೇಂದ್ರದಿಂದ ಹಣಕಾಸಿನ ನೆರವು ನೀಡುವ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳಿಕೆ ನೀಡುತ್ತಿದೆ ಎನ್ನುವ ಆರೋಪಗಳಿಗೆ ತಿರುಗೇಟು ನೀಡಿದ ಸೋನಿಯಾ, ಕೇಂದ್ರದ ಹಣವನ್ನು ಕಬಳಿಸಿದ ಬಿಜೆಪಿ ನಾಯಕರಿಂದ ಮೋದಿ ಮಾಹಿತಿ ಪಡೆಯಲಿ ಎಂದು ಲೇವಡಿ ಮಾಡಿದರು.
 
ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಯಾವತ್ತು ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ. ಪಕ್ಷ ಕೇವಲ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ. ಭರವಸೆಗಳನ್ನು ಜಾರಿಗೆ ತರುತ್ತದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ