ಗೃಹಲಕ್ಷ್ಮಿ ಯೋಜನೆಗೆ ಬರೊಬ್ಬರಿ 48,98,835 ಮಹಿಳೆಯರಿಂದ ಅರ್ಜಿ ಸಲ್ಲಿಕೆ

ಬುಧವಾರ, 26 ಜುಲೈ 2023 (20:00 IST)
ನಿನ್ನೆ ಒಂದೇ ದಿನ ಗೃಹ ಲಕ್ಷ್ಮಿ ಯೋಜನೆಗೆ 10,02,400  ಮಹಿಳೆಯರಿಂದ ನೋಂದಣಿಯಾಗಿದೆ.ಮೊದಲ ದಿನ  6೦ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ನೊಂದಣಿಯಾಗಿತ್ತು.ದಿನೇ ದಿನೇ ಗೃಹ ಲಕ್ಷ್ಮಿಯ‌ರ ನೋಂದಣಿ ಹೆಚ್ಚಾಗ್ತಿದೆ.ಮೊದಲ‌ ಎರಡ್ಮೂರು ದಿನ ಸರ್ವರ್ ಸಮಸ್ಯೆಯಿಂದ ಸ್ಲೋ ಆಗಿತ್ತು.ಈಗ ಕೆಲವೆಡೆ ಸರ್ವರ್ ಸಮಸ್ಯೆಗೆ ಕೊಂಚ‌ ಮುಕ್ತಿ‌ ಸಿಕ್ಕ‌ ಹಿನ್ನೆಲೆ ನೋಂದಣಿ‌ ಹೆಚ್ಚಳವಾಗಿದೆ.
 
ಅರ್ಜಿ ಹಾಕಲು ಯಾವೆಲ್ಲಾ ದಾಖಲಾತಿಗಳು ಬೇಕು?
 
ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ,ಪತಿಯ ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ಪ್ರತಿ ದಾಖಲಿಸಬೇಕು,ಆಧಾರ್‌ ನಂಬರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ಹೊರತುಪಡಿಸಿ,ಪರ್ಯಾಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಬಯಸಿದಲ್ಲಿ ಸದರಿ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ಮಾಹಿತಿ ಅಗತ್ಯವಾಗಿದೆ.ಗೃಹ ಲಕ್ಷ್ಮಿ ಹೆಚ್ಚಿನ ಮಾಹಿತಿಗೆ 1902 ಅಥವಾ 8147500500 ಸಂಪರ್ಕಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ