ಭಾರತ ಮಾತ್ರನಾ, ನಮ್ಮನ್ನೂ ಫ್ರೆಂಡ್ ಮಾಡ್ಕೊಳ್ಳಿ: ರಷ್ಯಾಗೆ ದುಂಬಾಲು ಬಿದ್ದ ಪಾಕ್ ಪ್ರಧಾನಿ

Krishnaveni K

ಬುಧವಾರ, 3 ಸೆಪ್ಟಂಬರ್ 2025 (11:46 IST)
ನವದೆಹಲಿ: ಶಾಂಘೈ ಶೃಂಗ ಸಭೆಯಲ್ಲಿ ಭಾರತ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸ್ನೇಹ ಸಂಬಂಧ ನೋಡಿ ಹೊಟ್ಟೆ ಉರಿದುಕೊಂಡಿರುವ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನಮ್ಮ ಜೊತೆಗೂ ಉತ್ತಮ ಸಂಬಂಧವಿಟ್ಟುಕೊಳ್ಳಿ ಎಂದು ರಷ್ಯಾಗೆ ದುಂಬಾಲು ಬಿದ್ದಿದ್ದಾರೆ.

ಶಾಂಘೈ ಶೃಂಗ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಎದುರಿಗೇ ಇದ್ದರೂ ಕ್ಯಾರೇ ಎನ್ನದೇ ಮೋದಿ-ಪುಟಿನ್ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಶಹಬಾಜ್ ಷರೀಫ್ ದಿಟ್ಟಿಸಿ ನೋಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಈಗ ಷರೀಫ್ ಕೂಡಾ ರಷ್ಯಾ ಅಧ್ಯಕ್ಷ ಪುಟಿನ್ ರನ್ನು ಭೇಟಿ ಮಾಡಿದ್ದರು. ಈ ವೇಳೆ ಭಾರತ-ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಪಾಕಿಸ್ತಾನ ಗೌರವಿಸುತ್ತದೆ. ಆದರೆ ನಮ್ಮ ಜೊತೆಗೂ ಸಂಬಂಧ ಸುಧಾರಣೆ ಮಾಡಿಕೊಳ್ಳಿ ಎಂದು ಮನವಿ ಮಾಡಿದೆ.

ರಷ್ಯಾವು ಪಾಕಿಸ್ತಾನ ಬೆಂಬಲ ನೀಡುವುದು ಈ ಪ್ರದೇಶದ ಸಮತೋಲನದ ಕ್ರಮವಾಗಲಿದೆ. ಇದಕ್ಕಾಗಿ ನಾವು ರಷ್ಯಾಕ್ಕೆ ಅಭಾರಿಗಳಾಗಿದ್ದೇವೆ. ಭಾರತದೊಂದಿಗೆ ನಿಮ್ಮ ಸಂಬಂಧಗಳನ್ನು ನಾವು ಗೌರವಿಸುತ್ತೇವೆ. ಆದರೆ ನಾವು ರಷ್ಯಾದೊಂದಿಗೆ ಸಂಬಂಧ ವೃದ್ಧಿಗೆ ಬಯಸುತ್ತಿದ್ದೇವೆ’ ಎಂದು ಬಣ್ಣದ ಮಾತನಾಡಿದ್ದಾರೆ. ಇನ್ನು ರಷ್ಯಾಕ್ಕೆ ಭೇಟಿ ನೀಡಲು ಪಾಕ್ ಪ್ರಧಾನಿಗೆ ಆಹ್ವಾನ ನೀಡಲಾಗಿದ್ದು ನವಂಬರ್ ನಲ್ಲಿ ಷರೀಫ್ ರಷ್ಯಾಗೆ ಭೇಟಿ ನೀಡುವ ಸಾಧ್ಯತೆಯಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ