ಸಿಎಂ ಗೆ ಮನವಿ ಮಾಡಲು ಬಂದು ಕುಸಿದು ಬಿದ್ದ ಮಹಿಳೆ

ಭಾನುವಾರ, 21 ಆಗಸ್ಟ್ 2022 (18:23 IST)
ಸಿಎಂ ಬೊಮ್ಮಾಯಿ ಹುಬ್ಬಳಿಗೆ ಪ್ರವಾಸ ಕೈಗೊಂಡಿದ್ರು. ಈ ವೇಳೆ ಸಿಎಂಗೆ ಮನವಿ ಮಾಡಲು ಬಂದ ಮಹಿಳೆಯೋರ್ವಳು ಕುಸಿದು ಬಿದ್ದಿದ್ದಾಳೆ. ಮಗನನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಸಿಎಂ ಬಳಿ ಅಳಲು ತೋಡಿಕೊಳ್ಳಲು ಬಂದಾಗ ಮಹಿಳೆ ಕುಸಿದು ಬಿದ್ದಿದ್ದಾಳೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈಕೆ ಹುಬ್ಬಳ್ಳಿಯ ಗಾಂಧಿ ನಗರ ನಿವಾಸಿಯಾಗಿದ್ದಾಳೆ. ಕುಸಿದು ಬಿದ್ದ ಮಹಿಳೆಗೆ ಪೊಲೀಸ್​​ ಸಿಬ್ಬಂದಿ ನೀರು ಕುಡಿಸಿ ಉಪಚರಿಸಿದ್ರು. ನಂತರ ಪೊಲೀಸ್​​​ ವಾಹನದಲ್ಲೇ ಮಹಿಳೆಯನ್ನು ಮನೆಗೆ ಕಳುಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ