ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ದೀಪಾವಳಿಯ ಸಂದರ್ಭದಲ್ಲಿ ಹಳೇ ದೆಹಲಿಯ ಐತಿಹಾಸಿಕ ಘಂಟೆವಾಲಾ ಸಿಹಿತಿಂಡಿ ಅಂಗಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆ ಇದೀಗ ಸುದ್ದಿಯಾಗಿದೆ.
ಅಂಗಡಿಯ ಮಾಲೀಕ ಸುಶಾಂತ್ ಜೈನ್ ಅವರು ಮದುವೆಯ ಆರ್ಡರ್ ಅನ್ನು ಪಡೆಯುವ ಸಲುವಾಗಿ ಅವರ ರಾಹುಲ್ ಗಾಂಧಿಯ ಮದುವೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಕೂಡ ಅಂಗಡಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಾಡುಗಳನ್ನು ತಯಾರಿಸಲು ಪ್ರಯತ್ನಿಸಿದರು.
ಸುಶಾಂತ್ ಜೈನ್ ಅವರು ರಾಹುಲ್ ಗಾಂಧಿಯನ್ನು ಭಾರತದ "ಮೋಸ್ಟ್ ಎಲಿಜಿಬಲ್ ಬ್ಯಾಚುಲರ್" ಎಂದು ಕರೆದರು ಮತ್ತು ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಸಿಹಿತಿಂಡಿಗಳನ್ನು ಖರೀದಿಸಲು ಬಯಸಿದ್ದರು ಎಂದು ಹೇಳಿದರು. "ಅವರು (ರಾಹುಲ್ ಗಾಂಧಿ) ತಮ್ಮ ಮನೆ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಿಹಿತಿಂಡಿಗಳನ್ನು ಖರೀದಿಸಲು ಬಯಸಿದ್ದರು. ನಾನು "ಸರ್, ನಿಮಗೆ ಸ್ವಾಗತ. ಇದು ನಿಮ್ಮ ಸ್ವಂತ ಅಂಗಡಿ ಎಂದು ಹೇಳಿದ್ದೇನೆ.
ಅವರನ್ನು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದು ಇಡೀ ಭಾರತವೇ ಮಾತನಾಡಿಕೊಳ್ಳುತ್ತಿದೆ. ನಾನು ಹೇಳಿದೆ, "ರಾಹುಲ್ ಜೀ, ದಯವಿಟ್ಟು ಶೀಘ್ರದಲ್ಲೇ ಮದುವೆಯಾಗಿ - ನಾವು ಕಾಯುತ್ತಿದ್ದೇವೆ, ಇದರಿಂದ ನಿಮ್ಮ ಮದುವೆಯ ಸಿಹಿತಿಂಡಿಗಳ ಆರ್ಡರ್ ಅನ್ನು ಸಹ ನಾವು ಪಡೆಯಬಹುದು" ಎಂದು ಸುಶಾಂತ್ ಜೈನ್ ಹೇಳಿದರು.