ಆಧಾರ್ ನೊಂದಣಿಗೆ ಈಗಲೂ ತಪ್ಪದ ಪರದಾಟ!

ಬುಧವಾರ, 1 ಆಗಸ್ಟ್ 2018 (14:04 IST)
ಆಧಾರ್ ನೊಂದಣಿಗಾಗಿ ಜನರ ಪರದಾಟ ಈಗಲೂ ತಪ್ಪುತ್ತಿಲ್ಲ. ಪ್ರತಿದಿನ ಕ್ಯೂ ನಲ್ಲಿ ಕಾದು ಕಾದು ಸುಸ್ತಾಗುತ್ತಿದ್ದಾರೆ ಹಳ್ಳಿ ಮಂದಿ. ತುಮಕೂರು‌ ಜಿಲ್ಲೆ ಕುಣಿಗಲ್ ನ ಆಧಾರ್ ನೊಂದಣಿ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

ಆಧಾರ್ ನಲ್ಲಿ ಲೋಪಗಳಿಂದ ಪಡಿತರ ಇಲ್ಲದೆ ಜನರು ಪರದಾಡುತ್ತಿರುವ  ಚಿತ್ರಣ ಸಾಮಾನ್ಯವಾಗಿದೆ. ಆಧಾರ್ ತಿದ್ದುಪಡಿ ಮಾಡಿಸಲು ನಿತ್ಯ ಪರದಾಟ ಕೆಲಸವಾದಂತೆ ಆಗಿಬಿಟ್ಟಿದೆ. ದಿನಕ್ಕೆ 15-20 ಜನಕ್ಕೆ ಮಾತ್ರ ನೊಂದಣಿ ತಿದ್ದುಪಡಿ ಮಾಡುತ್ತಿರುವ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ದೂರದ ಹಳ್ಳಿಗಳಿಂದ ಬರುತ್ತಿರುವ ಜನರು ಹಳ್ಳಿಗರು ತೊಂದರೆ ಎದುರಿಸುತ್ತಿದ್ದಾರೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕ್ಯೂನಲ್ಲಿ ನಿಂತು ಕಾದು ಕಾದು ವಾಪಾಸ್ಸಾಗುತ್ತಿದ್ದಾರೆ.

ಹಳ್ಳಿಗಳಿಂದ ಕೆಲಸ ಕಾರ್ಯ ಬಿಟ್ಟು ಪ್ರತಿದಿನ ಆಧಾರ್ ನೊಂದಣಿಗೆ ತಿರುಗುವ ಪರಿಸ್ಥಿತಿ ಎದುರಾಗುತ್ತಿರುವುದರಿಂದ ಆಧಾರ್ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ. ಹೀಗಾಗಿ ಜನರಿಂದ ಆಧಾರ್ ಸಿಬ್ಬಂದಿಗಳು ಸಹ ತರಾಟೆಗೆ ಒಳಗಾಗುತಿದ್ದಾರೆ. 
ಟೋಕನ್ ಕೊಟ್ಟು ವ್ಯವಸ್ಥಿತವಾಗಿ ನೊಂದಣಿ, ತಿದ್ದುಪಡಿ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ