ಗೌರಿ ಹತ್ಯೆ ಪ್ರಕರಣ: ಬಂಧಿತರ ಬಿಡುಗಡೆಗೆ ಆಗ್ರಹ

ಬುಧವಾರ, 1 ಆಗಸ್ಟ್ 2018 (13:54 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‍ಐಟಿ) ಬಂಧಿಸಿರುವ ಹುಬ್ಬಳ್ಳಿಯ ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಅಮಾಯಕರಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಸ್‍ಎಸ್‍ಕೆ ಸಮಾಜ ವತಿಯಿಂದ  ಬೃಹತ್ ಮೌನ ಮೆರವಣಿಗೆ ನಡೆಯಿತು.

ಗಣೇಶ ಮಿಸ್ಕಿನ್ ಹಾಗೂ ಅಮಿತ್ ಬದ್ದಿ ಸಮಾಜದ ಯುವಕರಾಗಿರಾಗಿದ್ದು, ಗೌರಿ ಲಂಕೇಶ್ ಹತ್ಯೆಯಲ್ಲಿ ಯಾವುದೇ ರೀತಿಯ ಪಾಲ್ಗೊಂಡಿಲ್ಲ. ಆದ್ದರಿಂದ ಇವರನ್ನು ಕೂಡಲೇ ಈ ಪ್ರಕರಣ ದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಜಸ್ಟಿಸ್ ಫಾರ್ ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್' ಅಭಿಯಾನದಡಿ ಎಸ್‍ಎಸ್‍ಕೆ ಸಮಾಜದ ಮುಖಂಡರ ಜಾಗೃತಿ ಅಭಿಯಾನ  ಮೂಡಿಸಿದರು.

ಅಮಾಯಕ ಯುವಕರನ್ನು ಸುಖಾಸುಮ್ಮನೆ ಅಪರಾಧಿ ಎಂದು ಬಿಂಬಿಸುತ್ತಿರುವುದು ಖಂಡನೀಯವಾಗಿದ್ದು, ಕುಟುಂಬದವರಿಗೆ ಏನನ್ನೂ ತಿಳಿಸದೇ ಏಕಾಏಕಿ ಬಂಧಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ  ಎಂದು ಸಂಘದ  ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ದಾಜಿಬಾನಪೇಟೆಯ ತುಳಜಾ ಭವಾನಿ ದೇವಸ್ಥಾನದಿಂದ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ