ಬೆಳಗಾವಿ ಸಮೀಪ ಅಪಘಾತ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು

ಗುರುವಾರ, 9 ಸೆಪ್ಟಂಬರ್ 2021 (13:15 IST)
ಬೆಳಗಾವಿ : ಹೊರವಲಯದ ಕಾಕತಿ ಸಮೀಪದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಬದಿಯಲ್ಲಿ ನಿಂತಿದ್ದ ಲಾರಿಗೆ ದ್ವಿಚಕ್ರವಾಹನ ಡಿಕ್ಕಿಯಾದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.

ನಗರದ ಚವಾಟ ಗಲ್ಲಿಯ ಶ್ರೀನಾಥ ದಿಗಂಬರ ಪವಾರ (21) ಮತ್ತು ಸದಾಶಿವ ನಗರದ ರುಚಿತ ಆರ್. ಡುಮಾವತ್ (21) ಮೃತರು. ಅವರು ಧಾಬಾವೊಂದರಲ್ಲಿ ಊಟ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಸ್ನೇಹತರೂ ಸಹಪಾಠಿಗಳೂ ಆಗಿದ್ದ ಇವರು ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ಕೊನೆಯ ವರ್ಷದ ವಿದ್ಯಾರ್ಥಿಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ