ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ: ವಧು ಸೇರಿದಂತೆ ಐವರು ಸಾವು

Sampriya

ಮಂಗಳವಾರ, 6 ಮೇ 2025 (16:00 IST)
ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಅ‍ಘಾತದಲ್ಲಿ ವಧು ಸೇರಿದಂತೆ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.  

ಮಂಗಳವಾರ ಬೆಳಗಿನ ಜಾವ ತಾಲೂಕಿನ ಕಿರೇಸೂರ ಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.

ಅಪಘಾತದಲ್ಲಿ ಮೃತ ಪಟ್ಟ ವಿಠಲ್ ಶೆಟ್ಟಿ ಅವರು ಕುಳಗೇರಿ ಕ್ರಾಸ್ ನಲ್ಲಿ ಕಳೆದ ಮೂರು ದಶಕಗಳಿಂದ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದರು. ಅವರ ಮಗಳಾದ ಶ್ವೇತಾ ಶೆಟ್ಟಿ ನಿಶ್ಚಿತಾರ್ಥಕ್ಕೆಂದು ಶಿವಮೊಗ್ಗ ಸಾಗರ ತಾಲೂಕಿನ ಹಾವಿನಹಳ್ಳಿ ಮೂರ್ಪಿಗೆ ತೆರಳಿದ್ದ ಅವರು ಮರಳಿ ಊರಿಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.


ವಿಠಲ್ ಅವರಿಗೆ ಐವರು ಸಹೋದರರು ಇದ್ದಾರೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ ನರಗುಂದದ ತಲಾಟೆ ಅಂಜಲಿ ಅವರು ಸಹ ಇದ್ದರು ಎಂದು ಮೃತ ಪಟ್ಟ ವಿಠಲ್ ಅವರ ಪರಿಚಯಸ್ಥರು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ