ಅಬ್ಬಯ್ಯ ನಾಯ್ಡು ಸ್ಟೂಡಿಯೋದಲ್ಲಿ ಆಕಸ್ಮಿಕ ಬೆಂಕಿ ಅವಘಡ

ಶನಿವಾರ, 15 ಏಪ್ರಿಲ್ 2023 (17:30 IST)
ಖಾಸಗಿ ವಾಹಿನಿಯವ ಸೆಟ್ ಪ್ರಾಪರ್ಟಿ ಇಟ್ಟಿದ್ದ ರೂಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರಾಪರ್ಟಿ ನಾಶವಾಗಿದೆ.12 ಗಂಟೆ ವೇಳೆಗೆ ಸಡನ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು,ಕ್ಷಣಮಾತ್ರದಲ್ಲಿ ಪ್ರಾಪರ್ಟಿ ಇಟ್ಟಿದ್ದ ಗೋಡೌನ್  ಬೆಂಕಿ ಆವರಿಸಿಕೊಂಡಿದೆ.
 
ಅಬ್ಬಯ್ಯನಾಯ್ಡು ಸ್ಟೂಡಿಯೋ ಗೋಡೌನ್ ಗೆ ಬೆಂಕಿ  ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ರು.ಸದ್ಯ ಗೋಡೌನ್ ಗೆ ಬಿದ್ದಿದ್ದ ಬೆಂಕಿಯನ್ನು ಸಂಪೂರ್ಣವಾಗಿ ಅಗ್ನಿಶಾಮಕ ಸಿಬ್ಬಂದಿ ಹಾರಿಸಿದ್ದಾರೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ.ಅಬ್ಬಯ್ಯನಾಯ್ಡು ಸ್ಟೂಡಿಯೋ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ