ದಶಪಥ ಹೆದ್ದಾರಿಯಲ್ಲಿ ಮತ್ತೆ ಅಪಘಾತಗಳು
ಅಪಘಾತಗಳ ಹಾಟ್‌ಸ್ಪಾಟ್ ಹಾಗೂ ಟೋಲ್ ರದ್ದಾಂತಗಳಿಂದ ಕೆಲ ದಿನಗಳಿಂದ ದೂರ ಉಳಿದಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಅನೇಕ ಯೋಜನೆಗಳು ಸ್ಥಗಿತಗೊಂಡಿದ್ದು, ಸಂಚಾರ ವಿಭಾಗದ ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರ ವರ್ಗಾವಣೆ ಬಳಿಕ ಹೈವೇ ಮತ್ತೆ ಅಧ್ವಾನಗೊಳ್ಳುತ್ತಿದೆ. 118 ಕಿ.ಮೀ ಎಕ್ಸ್‌ಪ್ರೆಸ್‌ವೇಯಲ್ಲಿ ರೆಸ್ಟ್ ಏರಿಯಾ ನಿರ್ಮಾಣ, ಹೆಲಿಪ್ಯಾಡ್ ಸೇರಿದಂತೆ ಒಂದಷ್ಟು ಕಾಮಗಾರಿಗಳಿಗೆ 1 ಸಾವಿರ ಕೋಟಿ ಅನುದಾನ ಹೆಚ್ಚುವರಿಯಾಗಿ ಕೇಳಲಾಗಿತ್ತು. ಚನ್ನಪಟ್ಟಣ-ರಾಮನಗರ ನಡುವೆ ರೆಸ್ಟ್ ಏರಿಯಾ ನಿರ್ಮಿಸಿ, ಸ್ಥಳೀಯ ಮಾರುಕಟ್ಟೆಗಳಿಗೆ ಅವಕಾಶ ನೀಡುವ ಭರವಸೆ ನೀಡಿಯೇ ವರ್ಷ ಕಳೆದಿವೆ. ಎಡಿಜಿಪಿ ಅಲೋಕ್ ಕುಮಾರ್ ಅವರ ವರ್ಗಾವಣೆ ಬಳಿಕ ಮತ್ತೆ ಅಪಘಾತಗಳು ಶುರುವಾಗಿವೆ. ಇನ್ನು ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಾಧಿಕಾರದ ಯೋಜನಾ ನಿರ್ದೇಶಕರೊಂದಿಗೆ ಸಭೆ ನಡೆಸಿ, ನಿರ್ದೇಶನ ನೀಡಲಾಗುವುದು. ಕ್ಯಾಮೆರಾ ಅಳವಡಿಕೆ ಬಗ್ಗೆ ಮಾಹಿತಿ ಕೇಳಲಾಗುವುದು ಎಂದು ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.