ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ

ಶನಿವಾರ, 24 ಆಗಸ್ಟ್ 2019 (10:13 IST)
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಈಗಾಗಲೇ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಯಾಣವಚನ ಸ್ವೀಕರಿಸಿದ್ದಾರೆ. ಇದೀಗ ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.




ಈಗಾಗಲೇ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ಅಮಿತ್ ಶಾ ರನ್ನು ಭೇಟಿ ಮಾಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಈ ಬಗ್ಗೆ ಚರ್ಚೆ ನಡೆಸಿದ್ದು, ಅವರ ಸೂಚನೆಯ ಮೇರೆಗೆ ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆಗೆ ಮಾಡಲಿದ್ದಾರೆ ಎನ್ನಲಾಗಿದೆ.


ಯಾರಿಗೆ ಯಾವ ಖಾತೆ ಎಂಬ ಮಾಹಿತಿ ಇಲ್ಲಿದೆ ನೋಡಿ:

*ಸಿಎಂ ಬಿ.ಎಸ್. ಯಡಿಯೂರಪ್ಪ- ಹಣಕಾಸು, ಜಲಸಂಪನ್ಮೂಲ, ಇಂಧನ, ಗುಪ್ತದಳ, ವಾರ್ತಾ, ಐಟಿಬಿಟಿ, ಗಣಿ ಹಾಗೂ ಭೂ ವಿಜ್ಞಾನ

*ಜೆ.ಸಿ. ಮಾಧುಸ್ವಾಮಿ -ಕಾನೂನು ಮತ್ತು ಸಂಸದೀಯ/ಕೃಷಿ

*ಈಶ್ವರಪ್ಪ-ಲೋಕಪಯೋಗಿ

*ಜಗದೀಶ್ ಶೆಟ್ಟರ್ -ಕಂದಾಯ

*ಸುರೇಶ್ ಕುಮಾರ್-ಪ್ರಾಥಮಿಕ, ಪ್ರೌಢ ಶಿಕ್ಷಣ/ನಗರಾಭಿವೃದ್ಧಿ

*ಸಿ.ಸಿ.ಪಾಟೀಲ್ -ಕನ್ನಡ ಮತ್ತು ಸಂಸ್ಕೃತಿ/ತೋಟಗಾರಿಕೆ

*ಗೋವಿಂದ ಕಾರಜೋಳ-ಸಮಾಜ ಕಲ್ಯಾಣ/ಗೃಹ

*ಶ್ರೀರಾಮುಲು-ಸಮಾಜ ಕಲ್ಯಾಣ/ಸಾರಿಗೆ

*ಸಿ.ಟಿ. ರವಿ -ಉನ್ನತ ಶಿಕ್ಷಣ/ಅರಣ್ಯ

*ಲಕ್ಷ್ಮಣ್ ಸವದ-ಸಹಕಾರ/ಸಕ್ಕರೆ

*ಆರ್. ಅಶೋಕ್-ಬೆಂಗಳೂರು ಅಭಿವೃದ್ಧಿ/ಗೃಹ

*ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ

*ಕೋಟ ಶ್ರೀನಿವಾಸ್ ಪೂಜಾರಿ- ಮೀನುಗಾರಿಕೆ/ಮುಜರಾಯಿ/ಬಂದರು

*ಪ್ರಭು ಚೌಹಾಣ್ -ಯುವಜನ ಸೇವೆ ಮತ್ತು ಕ್ರೀಡೆ/ಕೌಶಲ್ಯಾಭಿವೃದ್ಧಿ

*ನಾಗೇಶ್-ಸಣ್ಣ ಕೈಗಾರಿಕೆ/ಸಣ್ಣ ನೀರಾವರಿ/ಕಾರ್ಮಿಕ

*ಬಸವರಾಜ್ ಬೊಮ್ಮಾಯಿ-ಗ್ರಾಮೀಣಾಭಿವೃದ್ಧಿ/ಬೃಹತ್ ಕೈಗಾರಿಕೆ

*ವಿ.ಸೋಮಣ್ಣ-ವಸತಿ/ನಗರಾಭಿವೃದ್ಧಿ

*ಡಾ.ಅಶ್ವಥ್ ನಾರಾಯನ್ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ