ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಗೆ ಗುಂಡೇಟು

ಭಾನುವಾರ, 25 ಡಿಸೆಂಬರ್ 2022 (20:30 IST)
ಆನೇಕಲ್ ನಲ್ಲಿ ಪೊಲೀಸ್ ಪೇದೆ ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ರೌಡಿಶೀಟರ್, ವರುಣ್ ಎಂಬಾತನ ಮೇಲೆ ಪೊಲೀಸರು ಶೂಟ್ ಔಟ್ ಮಾಡಿದ್ದಾರೆ. ಜಿಗಣಿ ಸಮೀಪದ ಕಲ್ಲುಬಾಳು ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಮೂರು ದಿನದಿಂದ ತಲೆಮರೆಸಿಕೊಂಡಿದ್ದ ವರುಣ್ ಕಲ್ಲು ಬಾಳು ಗ್ರಾಮದಲ್ಲಿ ಇದ್ದ ಬಗ್ಗೆ ಪೊಲೀಸರು ಮಾಹಿತಿ ಪಡೆದು ಬಂಧಿಸಲು ಹೋದ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ವರುಣ್ ಹಲ್ಲೆಗೆ ಯತ್ನಿಸಿದ್ದಾನೆ, ಹೀಗಾಗಿ ಆತ್ಮ ರಕ್ಷಣೆಗಾಗಿ ಆನೇಕಲ್  ಇನ್ಸ್ ಪೆಕ್ಟರ್ ಚಂದ್ರಪ್ಪ ವರುಣ್ ಬಲಗಾಲಿಗೆ ಶೂಟೌಟ್ ಮಾಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ