ಹೆಂಡ್ತಿ ಸತ್ತಿದ್ದಾಳೆಂದು ಸರೆಂಡರ್ ಆದ: ಸ್ಥಳಕ್ಕೆ ಬಂದ ಪೊಲೀಸರಿಗೆ ಬಿಗ್ ಶಾಕ್…!
ಬೆಂಗಳೂರು: ಕುಡಿದ ಮತ್ತಲ್ಲಿ ಹೆಂಡತಿಯನ್ನು ಹತ್ಯೆ ಮಾಡಿದ್ದೇನೆ ಎಂದು ಪತಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ಚನ್ನನಾಯಕನ ಪಾಳ್ಯದಲ್ಲಿ ನಡೆದಿದೆ. ಆದರೆ ಇದನ್ನು ಕೇಳಿ ಮನೆಗೆ ಬಂದ ಪೊಲೀಸರಿಗೆ ನಿಜಕ್ಕೂ ಶಾಕ್ ಕಾದಿತ್ತು.
ರಘುಗೌಡನ ಮಾತು ಕೇಳಿ ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಕೊಲೆಯಾಗಿದ್ದಾಳೆ ಎಂದು ಭಾವಿಸಿದ್ದ ಪುಷ್ಪಲತಾ ಎದ್ದು ಕುಳಿತಿದ್ದಳು. ಇದನ್ನು ನೋಡಿದ ಪೊಲೀಸರೇ ಒಂದು ಕ್ಷಣ ಅವಕ್ಕಾಗಿದ್ದಾರೆ.