ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಗೆ ಅಭಿನಂದನೆ ತಿಳಿಸಿದ ಹಂಗಾಮಿ ಸಿ ಎಂ ಬೊಮ್ಮಾಯಿ

ಗುರುವಾರ, 18 ಮೇ 2023 (20:40 IST)
ಚುನಾವಣೆ ಫಲಿತಾಂಶ ಬಂದ ಆರು ದಿವಸ ನಂತರ ಸಿ ಎಂ ಆಗಿ ಅಧಿಕೃತವಾಗಿ ಘೋಷಣೆ ಆದ ಸಿದ್ದರಾಮಯ್ಯ ಹಾಗೂ  ಡಿ ಕೆ ಶಿವಕುಮಾರ್ ಅವರಿಗೆ ಹಂಗಾಮಿ ಸಿ ಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ತಿಳಿಸಿದ್ರು,ನಂತರ ಮಾತನಾಡಿದ ಅವರು 
ಪ್ರಜಾಪ್ರಭುತ್ವ ದಲ್ಲಿ ಜನ ಎನ್ ತೀರ್ಮಾನ ಕೊಡ್ತಾರೆ ಅದನ್ನ ಒಪ್ಪಬೇಕು,ಇವತ್ತು ನಮಗೆ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕೆಂಬುದನ್ನ ಜನ ತೀರ್ಮಾನ ಮಾಡಿದ್ದಾರೆ.ಜನ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸ ಇಟ್ಟಿದ್ದಾರೆ,ಇದನ್ನ ಕಾಂಗ್ರೆಸ್ ಅವರು ಪೂರೈಸಿಸಬೇಕು,ವಿರೋಧ ಪಕ್ಷವಾಗಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡ್ತೀವಿ,ರಾಜ್ಯಕ್ಕೆ ಅನ್ಯಾಯ ಆದಾಗ ನಾವು ಅದನ್ನ ಹೆಚ್ಚರಿಸುವ ಕೆಲಸವನ್ನ ಮಾಡ್ತೀವಿ,ನಾವು ಮತ್ತೆ ಮುಂದಿನ ಐದು ವರ್ಷಗಳಲ್ಲಿ ಪುಟಿದೆಳುತ್ತೇವೆ,ನಮ್ಮ ಪಕ್ಷದಲ್ಲಿ ಯಾವುದೇ ನಾಯಕತ್ವದ ಕೊರತೆ ಇಲ್ಲ.ಇನ್ನೂ ಎರಡು ಮೂರು ದಿವಸದಲ್ಲಿ ಶಾಸಕರ ಸಭೆ ಕರಿಯಲಿದೆ,ಸೋಲಿನ ಪರಾಮರ್ಶೆ ಆಗಲಿದೆ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ