ಪಕ್ಷದ ವರಿಷ್ಠರ ಜತೆ ಚರ್ಚಿಸಿ ಸೂರಜ್ ವಿರುದ್ಧ ಕ್ರಮ: ಜಿಟಿ ದೇವೇಗೌಡ

Sampriya

ಭಾನುವಾರ, 23 ಜೂನ್ 2024 (13:48 IST)
ಮೈಸೂರು: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿಯಲ್ಲಿ ಬಂಧನವಾಗಿರುವ ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಕ್ರಮ ಜರುಗಿಸುವ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆಂದು ಜೆಡಿಎಸ್‌ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು.

ಇಂದು ಸೂರಜ್ ರೇವಣ್ಣ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಸೂರಜ್‌ ಅವರನ್ನು ಬಂಧಿಸಿರುವ ವಿಷಯವೂ ನಿಮ್ಮಿಂದಲೇ (ಮಾಧ್ಯಮದಿಂದ) ತಿಳಿಯಿತು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ ಪಕ್ಷ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಆರೋಪಿಗಳು ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇ ಬೇಕೆಂದರು.

ಜೆಡಿಎಸ್ ಪಕ್ಷ ತಪ್ಪು ಮಾಡಿದವರ ಪರ ನಿಲ್ಲುವುದಿಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ, ಯಾರೇ ತಪ್ಪು ಮಾಡಿದರೂ ತಪ್ಪೇ ಶಿಕ್ಷೆ ಆಗಲೇ ಬೇಕೆಂದರು. ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಮುಜುಗರವೇಕೆ ಎಂದು ಕೇಳಿದ ಅವರು, ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೆ ಅದಕ್ಕೆ ಆರೂವರೆ ಕೋಟಿ ಜನ ಕಾರಣವೇ? ಅಲ್ಲ ತಾನೇ? ಇದೂ ಹಾಗೆಯೇ ಎಂದು ಪ್ರತಿಕ್ರಿಯಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ