ಮುಂದಿನ ಪೀಳಿಗೆಗೆ ನಾಡಿನ ವೀರ ಮಹಿಳೆಯರಾದ ಬೆಳವಾಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮನ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ಅವರ ಕುರಿತಾದ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಈ ಸಂಸ್ಥಾನ ಬೆಳೆದು ಬಂದ ರೀತಿ, ಶಿವಾಜಿ ಮಹಾರಾಜರ ವಿರುದ್ಧ ಅವರ ಹೋರಾಟದ ಬಗ್ಗೆ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮಿಗಳಿಗೆ ಅಪಾರ ಜ್ಞಾನವಿದೆ. ಅವರ ಕಳಕಳಿ, ನಾಡಿನ ಬಗ್ಗೆ ಅವರ ಪ್ರೀತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿತು ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಶಾಸಕ ಅರುಣ್ ಶಾಹಪುರ, ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಮತ್ತು ಎ.ಟಿ.