ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಮೇಲೆ ಕ್ರಮ ತೆಗೆದುಕೊಳ್ತೀವಿ- ಪರಮೇಶ್ವರ್

geetha

ಸೋಮವಾರ, 4 ಮಾರ್ಚ್ 2024 (14:00 IST)
ಬೆಂಗಳೂರು-ಖಾಸಗಿ ಸಂಸ್ಥೆ FSL ರಿಪೋರ್ಟ್‌ ಬಿಡುಗಡೆ ವಿಚಾರವಾಗಿ ನಗರದಲ್ಲಿ ಗೃಹಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಖಾಸಗಿ ಸಂಸ್ಥೆ ವರದಿ ಗಣನೆಗೆ ತೆಗೆದುಕೊಳ್ಳಲ್ಲ.ಸರ್ಕಾರದ FSL, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಮೇಲೆ ಕ್ರಮ ತೆಗೆದುಕೊಳ್ತೀವಿ.ಪಾಕ್ ಪರ ಘೋಷಣೆ ಕೂಗಿರೋದು ಧೃಡ ಆದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.
 
ಮರುದಿನವೇ ಪ್ರಿಯಾಂಕ್ ಖರ್ಗೆ ವರದಿ ಬಂದಿದೆ ಅನ್ನೋ ಹೇಳಿಕೆ ವಿಚಾರವಾಗಿ ಅವರು ಯಾವ ಅಧಾರದ ಮೇಲೆ ಹೇಳಿದ್ದಾರೆ ಗೊತ್ತಿಲ್ಲ.ಇದು ನಮ್ಮ‌ಇಲಾಖೆಗೆ ಸಂಬಂಧಿಸಿದ್ದು.ನಮ್ಮ ವರದಿ ಬಂದ ಮೇಲೆ ಹೇಳ್ತೀನಿ.ಖಾಸಗಿಯವರು ಯಾರು, ಅವರಿಗೆ NOC ಯಾರು ಕೊಟ್ಟಿದ್ದಾರೆ.ಅವರಿಗೆ ಈ ರೀತಿ ವರದಿ ಕೊಡಲು ಅನುಮತಿ ಇದೆಯಾ.?ಎಲ್ಲವನ್ನೂ ಚೆಕ್ ಮಾಡ್ತೀನಿ ಎಂದು ಪರಮೇಶ್ವರ್ ಹೇಳಿದ್ರು.
 
ಇನ್ನೂ ಕೆಫೆ ಬಾಂಬ್ ಬ್ಲಾಸ್ ವಿಚಾರವಾಗಿ ಸಭೆ ಮಾಡಿ ಈಗಾಗಲೇ ಎಲ್ಲವನ್ನೂ ಹೇಳಿದ್ದೇನೆ.ಕೆಲ ವಿಚಾರ ಹಂಚಿಕೊಳ್ಳಲು ಆಗಲ್ಲ.NIA ಈಗಾಗಲೇ ಬಂದಿದ್ದಾರೆ, NSG ಕೂಡ ಬಂದಿದ್ದಾರೆ ಇದರ ಹಿಂದೆ ಯಾರಿದ್ದಾರೆ, ವ್ಯಕ್ತಿ ಇದ್ದಾರಾ, ಸಂಘಟನೆ ಇದೆಯಾ.?ಎಲ್ಲವನ್ನೂ ಪರಿಶೀಲನೆ ಮಾಡಬೇಕು.ಜಾತಿಗಣತಿ ವರದಿ ವಿಚಾರವಾಗಿ  ಸಿಎಂ ಅವರೇ ಹೇಳಿದ್ದಾರೆ.ಕ್ಯಾಬಿನೆಟ್ ನಲ್ಲಿ ಇಟ್ಟು ನಿರ್ಧಾರ ಅಂತ ವಿರೋಧ ಮಾಡೋದು, ಪರ ಮಾಡೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದಿದ್ದೇ.ವರದಿ ತರಿಸಿಕೊಂಡ‌ಮೇಲೆ ಲಾಜಿಕ್ ಎಂಡ್ ಆಗಬೇಕು ಇಲ್ಲ ರಿಜೆಕ್ಟ್ ಮಾಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ