ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಪ್ರಕರಣವನ್ನ ಭೇದಿಸುತ್ತೇವೆ- ಪರಮೇಶ್ವರ್

geetha

ಭಾನುವಾರ, 3 ಮಾರ್ಚ್ 2024 (14:00 IST)
Photo Courtesy: Twitter
ಬೆಂಗಳೂರು-ರಾಮೇಶ್ವರಮ ಕೆಫೆಯಲ್ಲಿ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಕೆಲ ಮಾಹಿತಿ ಲಭ್ಯವಾಗಿದೆ, ಇನ್ನೂ ಹೆಚ್ಚಿನ ಕಲೆ ಹಾಕಲಾಗ್ತಿದೆ.ಟೆಕ್ನಿಕಲ್ ಡಿಟೈಲ್ಸ್ ಎಲ್ಲಾ ಕಲೆಹಾಕಲಾಗ್ತಿದೆ.ಎನ್‌ಎಸ್‌ಜಿ, ಎನ್‌ಐಎನವ್ರು, ಐಬಿನವ್ರು ಕೂಡ ಸಹಕರಿಸಿದ್ದಾರೆ.ಯಾರು ಸ್ಪೋಟ ಮಾಡಿದ್ದಾನೆ, ಅವನನ್ನ ಆದಷ್ಟು ಶೀಘ್ರವಾಗಿ ಹಿಡಿಯುತ್ತೇವೆ.ಒಂದು ದಿನ ಆಗಬಹುದು, ಎರಡು ದಿನ ಆಗಬಹುದು.ಘಟನೆ ಕುರಿತು ನಾನು ಅಲ್ಲಿಗೆ ಹೋದಾಗ ಎರಡು ಮೂರು ವಿಚಾರ ಕೇಳಿದೆ.ಈ ಹೊಟೇಲ್‌ನವ್ರು ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ,

12ನೇ ಬ್ರಾಂಚ್‌ಗೆ ಅಡ್ವಾನ್ಸ್ ಕೊಡಬೇಕಿತ್ತಂತೆ ಇದನ್ನ ಸಹಿಸದವರು ಈ ರೀತಿ ಮಾಡಿರಬಹುದು ಎಂದು ಮಾತನಾಡುತ್ತಿದ್ರು.ಅದನ್ನೂ ನಾವು ನೋಡ್ತೇವೆ, ಯಾವುದಾದರೂ ಸಂಘಟನೆಯವ್ರು ಬೆಂಗಳೂರನ್ನ ಅಸುರಕ್ಷಿತ ಮಾಡಲು ಈ ರೀತಿ ಮಾಡಿದ್ದಾರ ನಮಗೆ ಎಷ್ಟೇ ಕಷ್ಟವಾದರೂ ಬಿಡಲ್ಲ, ಪ್ರಕರಣವನ್ನ ಭೇದಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
 
ಮಂಗಳೂರು ಸ್ಪೋಟದ ಸಾಮ್ಯತೆ ಬಗ್ಗೆ ಭಿನ್ನ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಪರೋಕ್ಷ ವಾಗಿ  ಡಾ.ಜಿ‌.ಪರಮೇಶ್ವರ ಟಾಂಗ್ ಕೊಟ್ಟಿದ್ದಾರೆ.ಪ್ರಕರಣದ ಬಗ್ಗೆ ಬಹಳ ಜನ ಮಾತಾಡ್ತಾರೆ ನಮಗೂ ಇಕ್ಕಟ್ಟಾಗುತ್ತೆ.ನಾನಾಗಲಿ, ಇಲ್ಲವೇ ಸಿಎಂ ಮಾತನಾಡಿದ್ರೆ ಅರ್ಥ ಇರುತ್ತೆ.ಸಿಎಂ, ನಾನು ಮಾತನಾಡಿದ್ರೆ ಅಧಿಕೃತ ಅಂತ ಹೇಳಬಹುದು ಎಂದು ಪರಮೇಶ್ವರ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ