ಬೆಂಗಳೂರು: ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ ಘಟನೆ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆಯಾಗುವ ಸುದ್ದಿಯಾಗುವ ವಿಚಾರವಾದಿ ಚೇತನ್ ಅಹಿಂಸಾ ಈ ಘಟನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಎಂದು ಪೊಲೀಸರು ಎಫ್ ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂದಿದ್ದಾರೆ.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬೆಂಗಳೂರಿನಲ್ಲಿ ಅಂಗಡಿ ಮಾಲಿಕನೊಬ್ಬ ಹೇಳಿಕೊಂಡಿದ್ದಾನೆ. ಎಫ್ ಐಆರ್ ನಲ್ಲಿ ಜೋರಾದ ಸಂಗೀತ ಹೊಡೆಯಲು ಕಾರಣ ಎಂದು ಹೇಳುತ್ತದೆ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಯಾವುದನ್ನೂ ಸೇರಿಸಲಾಗಿಲ್ಲ. ಸಮಗ್ರ ಪೊಲೀಸ್ ತನಿಖೆ ಮತ್ತು ಸರಿಯಾದ ಶಿಕ್ಷೆ ಅಗತ್ಯ. ಬಿಜೆಪಿ ಶಾಸಕರು/ಸಂಸದರು ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವುದು ಕಂಡುಬಂದರೆ ಅವರನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದಿದ್ದಾರೆ.
ಸಹಜವಾಗಿಯೇ ಚೇತನ್ ಈ ಹೇಳಿಕೆಗೆ ನೆಟ್ಟಿಗರಿಂದ ಆಕ್ರೋಸ ವ್ಯಕ್ತವಾಗಿದೆ. ಸರಿಯಾಗಿ ವಿಷಯ ತಿಳಿದುಕೊಂಡು ಮಾತನಾಡಿ. ಈಗಾಗಲೇ ಆ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಅದು ಹನುಮಾನ್ ಚಾಲೀಸ ಹಾಕಿದ್ದಕ್ಕೆ ಎಂದು ತಿರುಗೇಟು ನೀಡಿದ್ದಾರೆ.