ಗೋ ಹತ್ಯೆ ನಿಷೇಧ ಪ್ರಶ್ನಿಸುವವರ ವಿರುದ್ಧ ಕೆಂಡ ಕಾರಿದ ನಟ ಜಗ್ಗೇಶ್

ಮಂಗಳವಾರ, 27 ಜೂನ್ 2017 (11:32 IST)
ಬೆಂಗಳೂರು: ಮೈಸೂರಿನಲ್ಲಿ ಸಾರ್ವಜನಿಕವಾಗಿ ಗೋ ಭಕ್ಷಣೆ ಮಾಡಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ನವರಸನಾಯಕ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ತೀಕ್ಷ್ಣ ಪ್ರತಿಕ್ರಿಯಿಸಿದ್ದಾರೆ.

 
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ಜಗ್ಗೇಶ್ ‘ಹಿಂದೂ ಧರ್ಮದ ನಂಬಿಕೆಗಳನ್ನು ಪ್ರಶ್ನೆ ಮಾಡುವವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮ ಎಲ್ಲಿದ್ದಾನೆ? ಕೃಷ್ಣ ಎಲ್ಲಿದ್ದಾನೆ ಎಂದು ಹಿಂದೂಗಳ ಪವಿತ್ರ ಪ್ರಾಣಿ ಗೋವುಗಳನ್ನು ಸಾರ್ವಜನಿಕವಾಗಿ ತಿಂದು ಸವಾಲು ಹಾಕುವವರನ್ನು ನಾವು ಸುಮ್ಮನೇ ನಿಂತು ನೋಡುತ್ತಿರುತ್ತೇವೆ.

ಹಿಂದೂ ಧರ್ಮದ ನಂಬಿಕೆಗಳು ಇತ್ತೀಚೆಗೆ ಚರ್ಚೆಯ ವಿಷಯವಾಗಿದೆ. ತಾಕತ್ತಿದ್ದರೆ ಬೇರೆ ಧರ್ಮದ ನಂಬಿಕೆಗಳನ್ನೂ ಹೀಗೇ ಪ್ರಶ್ನೆ ಮಾಡಲಿ ನೋಡೋಣ. ಹೀಗೆ ಬಹಿರಂಗವಾಗಿ ಭಾವನೆಗೆ ಧಕ್ಕೆ ಬರುವ ಹಾಗೆ ಬಹಿರಂಗವಾಗಿ ನಡೆದುಕೊಳ್ಳಬಾರದು ಎಂದು ಜಗ್ಗೇಶ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ