ಪ್ರವಾಹದಲ್ಲಿ ಸಿಲುಕಿದ ಪ್ರಾಣಿಗಳಿಗೆ ನೆರವಾದ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್

ಮಂಗಳವಾರ, 13 ಆಗಸ್ಟ್ 2019 (09:03 IST)
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ ಮನುಷ್ಯರ ರಕ್ಷಣೆಗೇನೋ ಹಲವರು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ಪ್ರಾಣಿಗಳ ಗೋಳು ಕೇಳುವವರು ಯಾರು?


ನಾಯಿಯಂತಹ ಪ್ರಾಣಿಗಳೇನೋ ಸಂತ್ರಸ್ತರಿಗೆಂದು ದಾನಿಗಳು ನೀಡಿರುವ ಬಿಸ್ಕತ್, ಹಾಲು ತಿಂದು ಬದುಕಬಹುದು. ಆದರೆ ದನ, ಮೇಕೆ ಮುಂತಾದ ಪ್ರಾಣಿಗಳ ಗತಿ ಏನು?

ಹೀಗಾಗಿಯೇ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಇಂತಹ ಜಾನುವಾರುಗಳ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸ್ವತಃ ಕೃಷಿ ಭೂಮಿಯೂ ಹೊಂದಿರುವ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ವಿಶೇಷ ವಾಹನದಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಮೇವು ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲೇ ಬೇಕು ಅಲ್ಲವೇ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ