ಸಚಿವೆ ಉಮಾಶ್ರೀ ಅಸ್ವಸ್ಥ

ಸೋಮವಾರ, 27 ಫೆಬ್ರವರಿ 2017 (16:07 IST)
ಬಾಗಲಕೋಟೆ: ಹನಗುಂದ ತಾಲೂಕಿನಲ್ಲಿ ನೋಟುಗಳ ಅಮಾನ್ಯ ನಿಷೇಧಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಚಿವೆ ಉಮಾಶ್ರೀ ಅಸ್ವಸ್ಥರಾಗಿದ್ದಾರೆ.


ತೀವ್ರ ಬಳಲಿಕೆಯಿಂದ ಅಸ್ವಸ್ಥರಾಗಿದ್ದ ಉಮಾಶ್ರೀಯವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಸದ್ಯಕ್ಕೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಇದರಲ್ಲಿ ಸಚಿವೆ ಹಾಗೂ ಚಿತ್ರ ನಟಿ ಉಮಾಶ್ರೀ ಭಾಗವಹಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ