ಎ.ಡಿ.ಜಿ.ಪಿ. ಅಮೃತ್ ಪೌಲ್ ಸ್ಪೋಟಕ ಮಾಹಿತಿ

ಶುಕ್ರವಾರ, 8 ಜುಲೈ 2022 (17:17 IST)
ಸೆಕ್ಷನ್ 164 ಅಡಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶದ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹಠ ಹಿಡದಿದ್ದಾರೆ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರೆ ಸರ್ಕಾರದ ಸಚಿವರು, ಹಿಂದಿನ ಗೃಹ ಸಚಿವರು, ಮಾಜಿ ಸಿಎಂ ಪುತ್ರನ ಬಣ್ಣ ಬಯಲಾಗಲಿದೆ ಎಂಬ ಭೀತಿ ಇದೆ ಎಂದು ಹೇಳಲಾಗುತ್ತಿದೆ.
ಅಮೃತ್ ಪೌಲ್, ಸರ್ಕಾರದ ಸಚಿವರು, ಸಿಎಂ ಅವರ ಸಹಕಾರವಿಲ್ಲದೆ ಇದನ್ನೆಲ್ಲಾ ಹೇಗೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಪಿಎಸ್‌ಐ ಹಗರಣ ಮ್ಯಾಜಿಸ್ಟ್ರೇಟ್ ಮುಂದೆ ಎಡಿಜಿಪಿ ಹೇಳಿಕೆ ದಾಖಲಿಸಿದರೆ ಸರ್ಕಾರದ ಬುಡಕ್ಕೆ ಬರುವ ಸಾಧ್ಯತೆ ಇದೆ. ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿ ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳು ತಪ್ಪಿಸಿಕೊಳ್ಳಲು ಬಿಡುವುದಿಲ್ಲ. ಎಲ್ಲರ ಬಣ್ಣ ಬಯಲು ಮಾಡುತ್ತಾನೆ ಎಂದು ವಾರ್ನಿಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ