ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಕುರಿತು ನೀಡಿರುವ ಹೇಳಿಕೆ ಹಲವು ದಿನಗಳಿಂದ ಭಾರಿ ವಿವಾದ ಸೃಷ್ಟಿಸಿದೆ. ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳು ಈ ಹೇಳಿಕೆ ವಿರುದ್ಧ ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿವೆ.
ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಒಂದೇ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ಬರ್ಬರ ಹತ್ಯೆಯನ್ನೂ ಮಾಡಲಾಗಿದ್ದು, ಈ ಹಿಂಸಾಚಾರ ಇನ್ನಷ್ಟು ಉಗ್ರ ರೂಪ ಪಡೆಯುತ್ತಲೇ ಇದೆ.
ಮುಸ್ಲಿಂ ಧರ್ಮಗುರು ಜಾಕಿರ್ ನಾಯ್ಕ್ ಅವರು ಭಾಷಣವೊಂದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಹೇಳಿರುವ ಹೇಳಿಕೆಯನ್ನೇ ವಿಡಿಯೋ ಸಹಿತವಾಗಿ ಸಾಕ್ಷ್ಯಾಧಾರ ನೀಡುವ ಮೂಲಕ ನೂಪುರ್ ಪುನರುಚ್ಚರಿಸಿದ್ದರು. ಆದರೆ ನೂಪುರ್ ನೀಡಿರುವ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಡೀ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಒಂದು ವರ್ಗ.
ಆದರೆ ಈ ನಡುವೆಯೇ ಭಾರಿ ಕುತೂಹಲದ ಅಭಿಯಾನವೊಂದು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಅದೇ ಅರೆಸ್ಟ್ ತಸ್ಲೀಮ್ ರೆಹಮಾನಿ (#ArrestTasleemRahmani) ಎಂಬ ಹ್ಯಾಷ್ಟ್ಯಾಗ್ ಬಳಸಿ ಇವರನ್ನು ಅರೆಸ್ಟ್ ಮಾಡುವಂತೆ ಚಳವಳಿಯನ್ನು ಶುರು ಮಾಡಲಾಗಿದೆ.