ಚುನಾವಣಾ ಅಧಿಕಾರಿಗಳ ಮೇಲೆ ನಟ ಆದಿತ್ಯ ಕೋಪಗೊಂಡಿದ್ಯಾಕೆ?

ಸೋಮವಾರ, 14 ಮೇ 2018 (08:13 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಆದಿತ್ಯ ಅವರು ಇದೀಗ ಚುನಾವಣಾ  ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ತಕ್ತಪಡಿಸಿದ್ದಾರೆ.


ಯಾಕೆಂದರೆ ನಟ ಆದಿತ್ಯ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಮುನ್ನ ಒಂದು ಮಾಹಿತಿ ಕೂಡ ನೀಡದೆ ಏಕಾಏಕಿ ಹೆಸರು ತೆಗೆದು ಮತ ಹಾಕಲು ಹೋದವರನ್ನು  ವಾಪಸ್ ಬರುವಂತೆ ಮಾಡಿದ್ದು ಇವರ ಆಕ್ರೋಶಕ್ಕೆ  ಕಾರಣವಾಗಿದೆ.
 ಈ ಬಗ್ಗೆ ನಟ ಆದಿತ್ಯ ಅವರು ತಮ್ಮ ಟ್ವೀಟರ್ ನಲ್ಲಿ,’ ಚುನಾವಣಾಧಿಕಾರಿಗಳು ಏನು ಮಾಡುತ್ತಿದ್ದಾರೆ ಗೊತ್ತಿಲ್ಲ. ಪಟ್ಟಿಯಿಂದ ನನ್ನ ಹೆಸರು ತೆಗೆದು ಮತಹಾಕುವ ಹಕ್ಕನ್ನೆ ತೆಗೆದು ಹಾಕಿದ್ದಾರೆ. ಹೀಗೆ ಏಕಾಏಕಿ ಮಾಹಿತಿ ನೀಡದೆ ಹೆಸರನ್ನು ತೆಗೆದು ಹಾಕಿ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ಮತದಾರರ ಮೇಲೆ ಗೂಬೆ ಕೂರಿಸುವುದು ಏಕೆ. ಇದು ಎಷ್ಟು ಸರಿ ಎಂದು ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ