ರಮ್ಯಾ ರನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಇದೇ ಕಾರಣಕ್ಕಾಗಿಯಂತೆ!
ಸೋಮವಾರ, 14 ಮೇ 2018 (07:40 IST)
ಬೆಂಗಳೂರು : ಶನಿವಾರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಅವರು ಮತದಾನ ಮಾಡದ ಹಿನ್ನಲೆಯಲ್ಲಿ ಇದೀಗ ಅವರನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಅವರು ಮತದಾನ ಮಾಡದೆ ಇರುವುದರಿಂದ ಜನ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ನಂಬರ್ ಒನ್ ಸಿಟಿಜನ್ ಅಂತ ಲೇವಡಿ ಮಾಡಿದ್ದಾರೆ. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ. ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ’ ಎಂದು ರಮ್ಯಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ