ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ-ಯಡಿಯೂರಪ್ಪ

geetha

ಶನಿವಾರ, 3 ಫೆಬ್ರವರಿ 2024 (16:41 IST)
ಬೆಂಗಳೂರು-ಅಯೋಧ್ಯೆಯಲ್ಲಿ ರಾಮ ಕಾಣೋದಾದ್ರೆ ಮೂಲ ಕಾರಣ ಅಡ್ವಾನಿ ಅವರು.ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವ ಸಂಧರ್ಭದಲ್ಲಿ, ಅಡ್ವಾನಿ ಅವರ ಸಭೆಯಲ್ಲಿ ಭಾಗಿಯಾಗೋ ಸೌಭಾಗ್ಯ ನನ್ನದಾಗಿತ್ತು.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ.ಇಂತಹ ಸಂಧರ್ಭದಲ್ಲಿ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.ಕರಸೇವಕರಾಗಿ ಆರಂಭಿಸಿದ ಯಾತ್ರೆ, ಇಂದು ರಾಮ ಮಂದಿರ ನಿರ್ಮಾಣ ಆಗೋವರೆಗೂ ಅವರ ಅನೇಕ ಕಾರ್ಯಗಳಿವೆ.ಹಿರಿಯರಾದ ದಿವಂಗತ ವಾಜಪೇಯಿ ಅವರ ಸಂಪುಟದಲ್ಲಿ ದಿಟ್ಟ ನಿರ್ಣಯ ತೆಗೆದುಕೊಂಡಿದ್ದಾರೆ.ಕಂದಾಹಾರ್ ವಿಮಾನ ಅಪಹರಣ ಸಂಧರ್ಭದಲ್ಲಿ, ಉತ್ತಮ ಸಲಹೆ ನೀಡಿದ್ರು‌ ಎಂದು ಮಾಜಿ ಯಡಿಯೂರಪ್ಪ ಹೇಳಿದ್ದಾರೆ
 
ಅಡ್ವಾನಿ ಅವರ ಸೇವೆಯನ್ನು ಗುರ್ತಿಸಿ, ಎಲ್ಲವನ್ನ ಗಮನಿಸಿ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ನಿಡೀದ್ದನ್ನ ಗೌರವಿಸ್ತೇನೆ.ಅಡ್ವಾನಿ ಅವರ ಜೊತೆ ರಥಯಾತ್ರೆಯಲ್ಲಿ ಭಾಗಿಯಾಗಿದ್ದೆ.ಪೇಜಾವರ ಶ್ರೀಗಳು ರಾಮಮಂದಿರದಲ್ಲಿ ಮಾರನೆ ದಿನ ಪ್ರತಿಷ್ಟಾಪನೆ ಮಾಡಿದ ಸಂದರ್ಭದಲ್ಲಿ ನಾನು ಉಪಸ್ಥಿತಿ ಇದ್ದೆ.ಅದು ನನ್ನ ಪುಣ್ಯ.ಕೋಟ್ಯಾಂತರ ಕಾರ್ಯಕರ್ತರು ಕುಣಿದು ಕುಪ್ಪಳಿಸ್ತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ