ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ರಾಜ್ಯ ಸರ್ಕಾರಕ್ಕೆ ತಜ್ಞರಿಂದ ಸಲಹೆ

ಬುಧವಾರ, 25 ಮಾರ್ಚ್ 2020 (10:32 IST)
ಬೆಂಗಳೂರು : ಕೊರೊನಾ ಭೀತಿ ಹಿನ್ನಲೆಯಲ್ಲಿ ಲಾಕ್ ಔಟ್ ಮಾಡಿದ ರಾಜ್ಯ ಸರ್ಕಾರಕ್ಕೆ ಇದೀಗ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವುದು ಒಂದು ಸವಾಲಾಗಿದೆ.


ಅಗತ್ಯ ವಸ್ತುಗಳ ಖರೀದಿಗೆ ಜನರು ಬೀದಿಗಿಳಿಯುತ್ತಿದ್ದಾರೆ. ಇದರಿಂದ ಲಾಕ್ ಔಟ್ ವ್ಯರ್ಥವಾಗುದಲ್ಲದೇ ಜನರಿಗೆ ಅಪಾಯ ತಪ್ಪಿದ್ದಲ್ಲ. ಆದಕಾರಣ ಅಗತ್ಯ ವಸ್ತುಗಳ ಖರೀದಿಗೆ ರಾಜ್ಯ ಸರ್ಕಾರಕ್ಕೆ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.


ಜನರು ವಸ್ತುಗಳ ಖರೀದಿಗೆ ಗುಂಪು ಗುಂಪಾಗಿ ಸೇರುವುದನ್ನು ತಡೆಯಲು ಸಮಯ ನಿಗದಿ ಮಾಡಬೇಕು. ಸಮರ್ಪಕ ದಿನಸಿ ವಿತರಣೆಗೆ ಟೋಕನ್ ವ್ಯವಸ್ಥೆ ಮಾಡಬೇಕು. 10-15ದಿನಕ್ಕೆ ಒಂದೇ ಬಾರಿ ದಿನಸಿ ಸಂಗ್ರಹ ಮಾಡಬೇಕು. ಜನರಿಗೆ ಈ ಬಗ್ಗೆ ತಿಳಿಸಿ ಹೇಳಬೇಕು. ಮನೆಗೆ ದಿನಸಿ ತಲುಪುವ ವ್ಯವಸ್ಥೆ ಆಗಬೇಕು. ಅಗತ್ಯ ವಸ್ತುಗಳನ್ನು ಆನ್ ಲೈನ್ ನಲ್ಲೇ ಪೂರೈಕೆ ಆಗುವಂತಿರಬೇಕು. ಈ ಕುರಿತು ರಾಜ್ಯ ಸರ್ಕಾರ ಜನರನ್ನು ಪ್ರೇರೆಪಿಸಬೇಕು. ತುರ್ತು ವ್ಯವಸ್ಥೆ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಜ್ಞರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ