ಕೊರೊನಾ ತಡೆಗಟ್ಟಲು ಮನೆಯಲ್ಲೇ ಯುಗಾದಿ ಸಂಭ್ರಮ ಆಚರಿಸಿ- ಸಿಎಂ ಮನವಿ

ಬುಧವಾರ, 25 ಮಾರ್ಚ್ 2020 (10:26 IST)
ಬೆಂಗಳೂರು : ಯುಗಾದಿ ಹಬ್ಬಕ್ಕೆ ರಾಜ್ಯದ ಸಮಸ್ತ ಜನರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಶುಭಾಶಯ ಕೋರುವುದರ ಜೊತೆಗೆ ಮನವಿಯೊಂದನ್ನು ಮಾಡಿದ್ದಾರೆ.

ಹೊಸ ಸಂವತ್ಸರ ಸರ್ವರಿಗೆ ಶುಭ ತರಲಿ. ಕೊರೊನಾ ತಡೆಗಟ್ಟಲು  ಮನೆಯಲ್ಲೇ ಯುಗಾದಿ ಸಂಭ್ರಮ ಆಚರಿಸಿ ಎಂದು ಟ್ವೀಟ್ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ. 

 

ಹಾಗೇ ಯಾರೂ ಗೊಂದಲ ಮತ್ತು ಆತಂಕ ಪಡುವ ಅಗತ್ಯವಿಲ್ಲ. ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಡಕು ಆಗಲ್ಲ. ಅಗತ್ಯ ವಸ್ತುಗಳು ದೊರೆಯುವಂತೆ ರಾಜ್ಯ ಸರ್ಕಾರ  ಕ್ರಮ ಕೈಗೊಳ್ಳುತ್ತೆ. ತರಕಾರಿ, ಹಣ್ಣುಗಳು, ಪೆಟ್ರೋಲ್, ಔಷಧಿ , ಎಟಿಎಂ ಸೇರಿದಂತೆ ಎಲ್ಲ ಸೌಲಭ್ಯದ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ಬಿಎಸ್ ವೈ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ