ಕೊರೋನಾ, ಮಂಕಿಪಾಕ್ಸ್ ನಂತ್ರ ಕಾಡ್ತಿದೆ ಪೋಲಿಯೋ ಭಯ !

ಶನಿವಾರ, 6 ಆಗಸ್ಟ್ 2022 (16:10 IST)
ಜಗತ್ತಿನಾದ್ಯಂತ ಕೊರೋನಾ ವೈರಸ್, ಮಂಕಿಪಾಕ್ಸ್ ಸೋಂಕು ಹರಡುತ್ತಿದ್ದು ಜನರಲ್ಲಿ ಆತಂಕ ಹುಟ್ಟು ಹಾಕಿದೆ. ಈ ಮಧ್ಯೆ ನ್ಯೂಯಾರ್ಕ್ನಲ್ಲಿ ಪೊಲೀಯೋ ಸಂಭಾವ್ಯ ಸಮುದಾಯ ಹರಡುವಿಕೆಯ ಭೀತಿ ಎದುರಾಗಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ವೈರಸ್ ವಿಶ್ವಾದ್ಯಂತ ಜನಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿದೆ. ಸೋಂಕಿಗೆ ತುತ್ತಾಗಿ ಅದೆಷ್ಟೋ ಮಂದಿ ಮೃತಪಟ್ಟರು.  ಇವತ್ತಿಗೂ ಇನ್ನೂ ಅದೆಷ್ಟೋ ಮಂದಿ ದೀರ್ಘಾವಧಿಯ ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರೋ ಮಂಕಿಪಾಕ್ಸ್ ಸಹ ಜನಜೀವನವನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಅಷ್ಟೂ ಸಾಲ್ದು ಅಂತ ಮತ್ತೆ ಪೋಲಿಯೋ ಭೀತಿ ಎದುರಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ