ಚಂದ್ರನಿಗೆ ಮುತ್ತಿಟ್ಟ ಬೆನ್ನಲ್ಲೇ ಸೂರ್ಯನ ಸಂಶೋಧನೆಗೆ ಸಜ್ಜದ ಇಸ್ರೋ

ಶುಕ್ರವಾರ, 25 ಆಗಸ್ಟ್ 2023 (14:46 IST)
ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು   ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ ೩, ಲ್ಯಾಂಡಿಂಗ್ ಯಶಸ್ವಿಯಾಗಿದೆ, ಹಾಗಾದ್ರೆ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದಿರುವ ಪ್ರಜ್ಞಾನ್ ರೋವರ್ ೧೪ ದಿನಗಳವರೆಗೆ ಚಂದ್ರನ ಅಂಗಳದಲ್ಲಿ ಏನೆಲ್ಲಾ ಸಂಶೋಧನೆ ನಡೆಸುತ್ತೆ, ಜೊತೆಗೆ ಇಸ್ರೋ ಯಶಸ್ವಿಯಾದ ಬೆನ್ನಲ್ಲೇ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಇಸ್ರೋ ಮುಂದಾಗ್ತಿದೆ,ಜೂಲೈ ೧೪ ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಸರಿಯಾಗಿ ಮಾಧ್ಯಾಹ್ನ  2:35 ಕ್ಕೆ ಉಡಾವಣೆ ಯಾಗಿದ್ದ ರಾಕೆಟ್ ಸತತವಾಗಿ 41 ದಿನಗಳ ಕಾಲ ನಿರಂತರವಾಗಿ ಚಂದ್ರ ನತ್ತ ಕ್ರಮಿಸಿ ಚಂದ್ರನ ಅಂಗಳದಲ್ಲಿ ಇಳಿದು ಯಶಸ್ವಿ ಕಂಡಿದೆ.

ಇನ್ನೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಅಧ್ಯಯನ ಆರಂಭಿಸಿದ್ದು, ಪ್ರಮುಖವಾಗಿ ಚಂದ್ರನ ಮೇಲೆ ಮುಂದಿನ 14 ದಿನಗಳವರೆಗೆ ಸಂಶೋಧನೆ ನಡೆಸಲಿದೆ,
ಪ್ರಜ್ಞಾನ್ ರೋವರ್ ಹೊರಬಂದ ತಕ್ಷಣ, ಪ್ರಮುಖ ತನಿಖೆಗಳು ನಡೆಯಲಿವೆ. ಮೊದಲ ಸಂಶೋಧನೆಯ ಭಾಗವಾಗಿ, ಚಂದ್ರನ ಮೇಲಿನ ನೆಲದ ಕಂಪನಗಳ ಅಂಶಗಳನ್ನು ಗುರುತಿಸುತ್ತದೆ.ಜೊತೆಗೆ ರಾಸಾಯನಿಕ ಸಂಯೋಜನೆಯ ಉಷ್ಣತೆಯ ಅದ್ಯಯನ ಮಾಡಲಾಗುತ್ತದೆ,ಮತ್ತು ಅಲ್ಲಿ ಇರುವ ವಿಕಿರಣಶೀಲ ವಸ್ತುಗಳನ್ನು ಹೊರಸೂಸುವ ಆಲ್ಫಾ ಕಣಗಳು. ಮೇಲ್ಮೈಯಲ್ಲಿರುವ ಕ್ಷ-ಕಿರಣಗಳು ಫ್ಲೋರೋಸೆನ್ಸ್ ಅನ್ನು ಸೃಷ್ಟಿಸುತ್ತವೆ,ಇದರ ಜೊತೆಗೆ ಖನಿಜಗಳು ಅನ್ವೇಷಣೆಯ ಕಾರ್ಯ ನಡೆಯುತ್ತದೆ ಅಂತಾ ನೆಹರು ತಾರಾಲಯದ ವಿಜ್ಞಾನಿ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಚಂದ್ರನಿಗೆ ಮುತ್ತಿಟ್ಟು ಯಶಸ್ವಿಯಾಗಿರುವ ವಿಕ್ರಮ್ ಲ್ಯಾಂಡರ್  ಯಶಸ್ವಿಯಾಗಿ ಇತಿಹಾಸದ ಪುಟ ಸೇರಿದೆ,ಇದರ ಬೆನ್ನಲ್ಲೇ  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸೂರ್ಯನ ಅಧ್ಯಯನಕ್ಕಾಗಿ ಮಿಷನ್ ಆದಿತ್ಯ-ಎಲ್ ೧, ಭಾರತ ಸೂರ್ಯನ ಅಧ್ಯಯನಕ್ಕಾಗಿ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ.ಇದು ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ ಆದಿತ್ಯ ಎಲ್ ೧ ರ ಉಡಾವಣೆಯಾಗಿರುತ್ತದೆ ಇದು ಭೂಮಿಯಿಂದ ಸರಿಸುಮಾರು ೧೫ ಲಕ್ಷ ಕೀ.ಮೀಟರ್‌ಗಳಷ್ಟು ದೂರ ಹೋಗಿ ಸೂರ್ಯನ ಚಲನ ವಲನಗಳ ಅಧ್ಯಯನ ನಡೆಸಲು ಸಜ್ಜಾಗ್ತಿದೆ.ಒಟ್ಟಾರೆ ಚಂದ್ರಯಾನ ೩ ವಿಕ್ರಮ್ ಲ್ಯಾಂಡರ್ ಬುಧವಾರ ಸಂಜೆ ಯಶಸ್ವಿಯಾಗಿ ಇತಿಹಾಸದ ಪುಟ ಸೇರಿ ಭಾರತ ಮುಂದುವರೆದ ರಾಷ್ಟ್ರವಾಗಿ ಹೊರ ಹೊಮ್ಮಿದೆ, ಇದೀಗ ಇಸ್ರೋ ವಿಜ್ಞಾನಿಗಳ ಕೆಲಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ,

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ