ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರಯಾನ-3 ಸಾಧನೆ ಐತಿಹಾಸಿಕ ಸಾಧನೆ, ಈ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆ ನೋಡ್ತಿದೆ. ರಷ್ಯಾ, ಅಮೆರಿಕ, ಚೀನಾ, ಭಾರತ ರಾಷ್ಟ್ರಗಳು ಮಾತ್ರ ಚಂದ್ರನಿಗೆ ಉಪಗ್ರಹ ಕಳಿಸಿದ್ದಾರೆ. ಈಗ ನಮ್ಮ ದೇಶ ಮಾತ್ರ ಚಂದ್ರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಕಳಿಸಿದೆ. ನಾವೆಲ್ರೂ ಇಸ್ರೋದ ಈ ಸಾಧನೆಯಿಂದ ಖುಷಿ ಪಡಬೇಕು ಎಂದರು.