ಇನ್ನೂ ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಇದೇ ವಿಷಯವಾಗಿ ಪ್ರತಿಕ್ರಿಯಿಸಿದ್ದು,ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿವೆ.ಮೇಜರ್ ಹೋಟೆಲ್ ಗಳಲ್ಲಿ ಜಾಸ್ತಿ ಖರ್ಚಾಗುವುದು ಹಾಲು, ಕಾಫಿ ಪುಡಿ, ಗ್ಯಾಸ್.ಇದ್ರಿಂದ ಚೈನೀಸ್, ನಾರ್ತ್ ಇಸ್ ತಿಂಡಿ ರೇಟ್ ಗಳು ಜಾಸ್ತಿಯಾಗಿವೆ.ಅದರ ಜೊತೆ ತುಪ್ಪ ರೇಟ್ ಜಾಸ್ತಿಯಾಗಿದೆ.ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಏರಿಕೆ ಮಾಡ್ತಿದ್ದಾರೆ.ಆದ್ರೆ ದರ ಏರಿಸುವ ವಿಚಾರದಲ್ಲಿ ಸಂಘ ಇಷ್ಟೇ ದರ ಮಾಡಿ ಅಂತ ನಾವು ಹೇಳಲ್ಲ.ಆಯಾ ಹೋಟೆಲ್ ಮಾಲೀಕರೇ ನಿರ್ಧಾರ ಮಾಡಿ ದರ ನಿಗದಿ ಮಾಡಿದ್ದಾರೆ.
ಗ್ಯಾಸ್ ದರ 200 ಜಾಸ್ತಿ ಆಗಿದೆ, ಬಿಲ್ಡಿಂಗ್ ಮೇಲೆ ಜಿಎಸ್ಟಿಯಿಂದ ಹೊರೆ ಆಗ್ತಿದೆ.ಕಮರ್ಷಿಯಲ್ ಗ್ಯಾಸ್ಗೆ 80% ಟ್ಯಾಕ್ಸ್ ಕಟ್ಟುತ್ತಿದ್ದೇವೆ .ಕಾರ್ಮಿಕರ ಅಭಾವವಿದೆ, ಮಾರುಕಟ್ಟೆಯಲ್ಲಿ ವಸ್ತುಗಳ ದರ ಜಾಸ್ತಿ ಆಗಿದೆ.ಮತ್ತೆ ಹೋಟೆಲ್ ಕ್ವಾಲಿಟಿ ಮೆಂಟೇನ್ ಮಾಡೋದು ಇದ್ರಿಂದ ದರ ಏರಿಕೆ ಮಾಡಿದ್ದಾರೆ.ನಾವು 15 ರಿಂದ 20 ಪರ್ಸೆಂಟ್ ಏರಿಕೆ ಮಾಡ್ತಿವೆ, ಕೆಲ ಹೋಟೆಲ್ ಗಳು ಮಾಡಿದ್ದಾರೆ.ದರ ಏರಿಕೆ ವಿಚಾರದಲ್ಲಿ ಗ್ರಾಹಕರು ನಮಗೆ ಸಹಕರಿಸಬೇಕು.ಒಳ್ಳೆ ಪದಾರ್ಥ ಕೊಡಬೇಕಂದ್ರೆ ದರ ಏರಿಕೆ ಅನಿವಾರ್ಯ.ಆದ್ರೆ ಸಂಘದ ವತಿಯಿಂದ ದರ ಏರಿಕೆ ವಿಚಾರವಾಗಿ ಇನ್ನು ನಿರ್ಧಾರ ಮಾಡಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಪಿಸಿ ರಾವ್ ಹೇಳಿದ್ದಾರೆ.