ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ ಎಚ್ಚರ ಕಟ್ಟೆಚ್ಚರ...!

ಬುಧವಾರ, 14 ಡಿಸೆಂಬರ್ 2022 (17:45 IST)
ರಾಜಧಾನಿಯಲ್ಲಿ  ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಮಕ್ಕಳನ್ನ ಹೊರಗೆ ಬಿಡೋ ಮುನ್ನ ಪೋಷಕರು ಸ್ವಲ್ಪ ಎಚ್ಚರವಹಿಸಬೇಕು.ಬೀದಿ ನಾಯಿಗಳಿಗೆ ಆಟ, ಸಿಲಿಕಾನ್ ಸಿಟಿ ಜನ್ರಿಗೆ ಸಂಕಟ ಇದೀಗ ಶುರುವಾಗಿದೆ.ದಿನ ನಿತ್ಯ ಬೀದಿ ನಾಯಿಗಳ ಆಟ್ಯಾಕ್ ಹೆಚ್ಚಾಗ್ತಿದೆ.ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ.ಮನೆಯಿಂದ ಹೊರ ಬರುವ ಮುನ್ನ ಎಚ್ಚರ ವಹಿಸಬೇಕು.
 
ಪಶುಸಂಗೋಪನೆ ಇಲಾಖೆ  ಬೆಚ್ಚಿ ಬಿಳಿಸೋ ಮಾಹಿತಿ ನೀಡಿದೆ.ದಿನಕ್ಕೆ ಸರಾಸರಿ 70 ಕ್ಕೂ ಹೆಚ್ಚು ಜನಕ್ಕೆ ಬೀದಿ ನಾಯಿಗಳು ಕಚ್ಚುತ್ತಿವೆ.ಮಕ್ಕಳನ್ನ ಹೊರಗೆ ಕಳಿಸುವ ಮುನ್ನ ಪೋಷಕರೇ ಎಚ್ಚರಿಕೆ ವಹಿಸಿ.ಕಳೆದ 3 ವರ್ಷದಲ್ಲಿ 70,057 ಪ್ರಕರಣಗಳು ದಾಖಲಾಗಿದೆ.
 
2019-2020ರಲ್ಲಿ 42,818 ಪ್ರಕರಣ ದಾಖಲಾಗಿದೆ.2020-2021 ರಲ್ಲಿ 18,629 ಪ್ರಕರಣ ದಾಖಲಾಗಿದೆ.2021-2022 ರಲ್ಲಿ 17,610 ಪ್ರಕರಣ ದಾಖಲಾಗಿದೆ.ರಾತಿ ವೇಳೆಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ.ರಾತ್ರಿ ವೇಳೆ ಓಡಾಡುವ ಜನರ ಮೇಲೆ ನಾಯಿಗಳು ಎಗರುತ್ತಿದ್ದು,ರಸ್ತೆ ಬದಿಯಲ್ಲಿರುವ ನಿರ್ಗತಿಕರಿಗೂ  ಬೀದಿ ನಾಯಿಗಳು ಕಾಡುತ್ತಿವೆ.ವಾಹನದಲ್ಲಿ ತೆರಳುವವರಿಗೂ ಕಿರಿಕ್ ನಾಯಿಗಳು ಕಾಟ ಕೊಡುತ್ತಿದೆ.ನಾಯಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಬೀಳುತ್ತಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 3.09 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ.ಹೀಗಾಗಿನಾಯಿಗಳ ಕಾಟಕ್ಕೆ ಮುಕ್ತಿ ನೀಡುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
 
ಯಾವ ವಲಯದಲ್ಲಿ ಎಷ್ಟು ನಾಯಿಗಳಿವೆ..?
 
ವಲಯ                          ಬೀದಿ ನಾಯಿಗಳ ಸಂಖ್ಯೆ
ಪೂರ್ವ ವಲಯ                 44,302
ಪಶ್ಚಿಮ ವಲಯ                  28,482
ದಕ್ಷಿಣ ವಲಯ.                   39,562
ಆರ್.ಆರ್. ನಗರ                23,170
ದಾಸರಹಳ್ಳಿ                         23,170
ಯಲಹಂಕ.                         36,219
ಬೊಮ್ಮನಹಳ್ಳಿ.                     38,940
ಮಹದೇವಪುರ.                    46, 233
 
ನಾಯಿಗಳ ಹಾವಳಿ ತಡೆಯೋಕೆ ವರ್ಷಕ್ಕೆ 3 ರಿಂದ 5 ಕೋಟಿ ಖರ್ಚು ಮಾಡಲಾಗುತ್ತೆ.ಸಂತಾನ‌ಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕೋಕೆ ಕೋಟಿ ಖರ್ಚು ಮಾಡಲಾಗುತ್ತೆ.ಕಳೆದ ಮೂರು ವರ್ಷಗಳಲ್ಲಿ 1,81,585 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ.ಆದ್ರೂ ‌ನಾಯಿಗಳು ಮರಿ ಹಾಕುವ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.2,53,536 ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಲಾಗಿದೆ.ಆದ್ರು ನಾಯಿಗಳ ಉಪದ್ರ ತಪ್ಪುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ