ಮದ್ಯ ಖರೀದಿಸಲು ವಯಸ್ಸಿನಲ್ಲಿ ಸಡಿಲಿಕೆ...!

ಭಾನುವಾರ, 15 ಜನವರಿ 2023 (17:39 IST)
ಮದ್ಯ ಖರೀದಿ ಮಾಡಲು ಪ್ರಸ್ತುತ ಜಾರಿಯಲ್ಲಿರುವ ಕಾನೂನುಬದ್ಧ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ.ಕರ್ನಾಟಕ ಅಬಕಾರ ನಿಯಮಗಳು, 1967 ಕಾಯ್ದೆಯಡಿ ಮದ್ಯ ಖರೀದಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಸಡಿಲಿಕೆ ಮಾಡಲಿದೆ.
ಪ್ರಸ್ತುತ ಕರ್ನಾಟಕದಲ್ಲಿ ಮದ್ಯ ಖರೀದಿಸಲು ವಯಸ್ಸನ್ನು 20ಕ್ಕೆ ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ವಯಸ್ಸಿನ ಯುವಕರು/ಯುವತಿಯರು ಮದ್ಯ ಖರೀದಿ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೂ ಹೌದು.ಭಾರತದಲ್ಲಿ ಮತದಾನದ ವಯಸ್ಸನ್ನು 18ಕ್ಕೆ ನಿಗದಿಪಡಿಸಿರುವಾಗ ಮದ್ಯ ಖರೀದಿಗೂ ಇದೇ ನಿಯಮ ಜಾರಿಯಾಗಬೇಕೆಂಬುದು ಬಹುತೇಕರ ಒತ್ತಾಯವಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯ ಖರೀದಿಗೆ ಗರಿಷ್ಠ 18 ವಯಸ್ಸನ್ನು ನಿಗದಿಪಡಿಸಿರುವಾಗ ನಮ್ಮ ರಾಜ್ಯದಲ್ಲೂ ಇದೇ ನಿಯಮ ಜಾರಿಯಾಗಲಿ ಎಂಬುದು ಮದ್ಯ ಮಾರಾಟಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.ಹೀಗಾಗಿ ರಾಜ್ಯ ಸರ್ಕಾರ ನಿವೃತ್ತ ಅಧಿಕಾರಿ ಯಶ್ವಂತ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಇದೀಗ ಸಮಿತಿಯು ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದು ಅದರಲ್ಲಿ ಪ್ರಮುಖವಾಗಿ ಮದ್ಯ ಖರೀದಿಗೆ ನಿಗದಿಪಡಿಸಿರುವ ವಯೋಮಾನವನ್ನು ಬದಲಾವಣೆ ಮಾಡಲು ಸಲಹೆ ಮಾಡಿದ್ದಾರೆ.
 
ಹಣಕಾಸು ಇಲಾಖೆಯು ಯಶ್ವಂತ್ ನೇತೃತ್ವದ ಸಮಿತಿಯ ಶಿಫಾರಸುಗಳ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. 30 ದಿನಗಳಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿದೆ.
ದೇಶದಲ್ಲಿ ಮತದಾನದ ಅರ್ಹತೆ ಪಡೆಯುವ ವ್ಯಕ್ತಿಯ ವಯಸ್ಸು 18 ವರ್ಷಗಳು ಆಗಿರುವುದರಿಂದ, ಮದ್ಯ ಸೇವಿಸುವ ವಯಸ್ಸನ್ನು 18 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.
 
5,000 ಜನಸಂಖ್ಯೆ ಮೀರಿದ ನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರದ ಸ್ಥಳಗಳಲ್ಲಿ ಹೆದ್ದಾರಿ ಅಂಚಿನಿಂದ 500 ಮೀಟರ್, ನಗರ ಪ್ರದೇಶಗಳು ಮತ್ತು 5,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ 220 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವ ನ್ಯಾಯಾಲಯ ಮಾರ್ಡಿಡಿಸಿದ ಆದೇಶವನ್ನು ಸಹ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ