ಗವಿ ಗಂಗಾಧರ ದೇವಾಲಯದ ಶಿವನನ್ನ ಸ್ಪರ್ಶಿಸಿದ ಸೂರ್ಯದೇವ

ಭಾನುವಾರ, 15 ಜನವರಿ 2023 (17:36 IST)
ಮಕರ ಸಂಕ್ರಾಂತಿ ಹಬ್ಬದ ಈ ದಿನ ಪ್ರತಿ ವರ್ಷದಂತೆ ಈ ವರ್ಷವೂ ಗವಿ ಗಂಗಾಧರ ದೇವಾಲಯದ ಶಿವನನ್ನ ಸೂರ್ಯರಶ್ಮಿ ಸ್ಪರ್ಶಿಸಿದೆ.
 
ಸಂಕ್ರಾಂತಿಯಂದು ನಡೆಯುವ  ಈ ಕೌತುಕವನ್ನ ಜನರು ಕಣ್ತುಂಬಿಕೊಂಡ್ರು.ಪ್ರತಿವರ್ಷದಂತೆ ಈ ವರ್ಷ ಕೂಡ ಗವಿಗಂಗಾಧರನಿಗೆ  ಸೂರ್ಯದೇವ ನಮಿಸಿ ದಕ್ಷಿಣಾಯನದಿಂದ ಉತ್ತರಾಯಣಕ್ಕೆ  ಪಥ ಬದಲಾವಣೆ ಮಾಡಿದ್ರು.
 
 ಪಥ ಬದಲಾವಣೆಗೂ ಮುನ್ನ ಮೊದಲು ಶಿವಲಿಂಗವನ್ನ ಸಂಜೆ 5.20 ರಿಂದ 5.28 ರ  ಸಮಯದಲ್ಲಿ ಸೂರ್ಯದೇವ ಶಿವನಿಗೆ ನಮಸ್ಕರಿಸಿದ್ರು.
 
ಒಟ್ಟು 8 ನಿಮಿಷದ ಒಳಗೆ ಶಿವನನ್ನ ಸೂರ್ಯದೇವ ಸ್ಪರ್ಶಿಸಿದ್ದು, ಸೂರ್ಯ ಶಿವನನ್ನ ಸ್ಪರ್ಶಿಸುವ ವೇಳೆ ದೇವಸ್ಥಾನದ ಒಳ ಭಾಗಕ್ಕೆ ಯಾರಿಗೂ ಪ್ರವೇಶವಿದಿಲ್ಲ.ಈ ಕೌತುಕವನ್ನ ಭಕ್ತಾಧಿಗಳು ದೇವಾಲಯದ ಹೊರಭಾಗದ ಎಲ್ಇಡಿ ಸ್ಕ್ರೀನ್  ನಲ್ಲಿ ನೋಡಿದ್ರು.
 
ಸೂರ್ಯರಶ್ಮಿ ಸ್ಪರ್ಶಿಸಿದ ನಂತರ ಶಿವನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಲಾಗಿದ್ದು ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ