ಮಕ್ಕಳಲ್ಲಿ ಉಲ್ಬಣಿಸುತ್ತಿರುವ ಬಾಯಿ ಹುಣ್ಣು...!
ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಮನೆಯಲ್ಲಿದ್ದ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೀಗ ವಾತಾವರಣ ಬದಲಾವಣೆಯಿಂದಾಗಿ ಕೈ, ಬಾಯಿ ಮತ್ತು ಕಾಲು ಹುಣ್ಣಿನ ಕಾರಣಕ್ಕೆ ಬಹುತೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸಾಲುಗಟ್ಟಿರುವುದು ಸಾಮಾನ್ಯವಾಗಿದೆ. ಕಾಕ್ಸಾಕಿ ವೈರಸ್ನಿಂದ ಮಕ್ಕಳಲ್ಲಿ ಕೈಕಾಲು, ಬಾಯಿ ಹುಣ್ಣು ಕಾಣಿಸಿಕೊಂಡರೂ ಪರಿಣಾಮ ತೀವ್ರವಾಗಿರುವುದಿಲ್ಲ. ಹಾಗಾಗಿ ಇದಕ್ಕೆ ಈವರೆಗೂ ಯಾವುದೇ ಲಸಿಕೆ ಲಭ್ಯವಿಲ್ಲ. ಇದು 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದೆ