ಹೊಸದಾಗಿ ಒಂದೇ ದಿನ 22 ಕೊರೊನಾ ವೈರಸ್ ಕೇಸ್ ಗಳು ದೃಢಪಟ್ಟಿದ್ದು, ಆ ಮೂಲಕ 107 ಕ್ಕೆ ಸೋಂಕಿತರ ಸಂಖ್ಯೆ ಈ ಜಿಲ್ಲೆಯಲ್ಲಿ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ , ಬೆಳಗಾವಿ ಜಿಲ್ಲೆಯಲ್ಲಿ ಅಜ್ಮೇರದಿಂದ ಬೆಳಗಾವಿಗೆ ಮರಳಿಬಂದ 22 ಜನರಿಗೆ ಕೊರೋನಾ ಸೋಂಕು ಇರುವದು ದೃಢವಾಗಿದೆ.
ಹೊಸದಾಗಿ ದೃಢಪಟ್ಟ 22 ಸೋಂಕಿತರು ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರಾಗಿದ್ದಾರೆ.
ತಬ್ಲೀಘಿ ಜಮಾತಿನ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೇರ್ ದಿಂದ ಮರಳಿದವರ ನಂಟು ಶುರುವಾಗಿದೆ. ಅಜ್ಮೇರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ. ಕೆಲವು ದಿನಗಳ ಹಿಂದೆ ಅಜ್ಮೇರದಿಂದ ಬೆಳಗಾವಿ ಗಡಿ ಪ್ರವೇಶ ಮಾಡಿದ ಇವರನ್ನು ತವನಿಧಿ ಘಾಟ್ ನಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಅಜ್ಮೇರ್ ನಲ್ಲಿ ಇವರನ್ನು 40 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಬೆಳಗಾವಿ ಗಡಿ ಪ್ರವೇಶ ಮಾಡಿದ ತಕ್ಷಣ
ಇವರನ್ನು ನಿಪ್ಪಾಣಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಡಲಾಗಿತ್ತು.